ಹೋರಾಟ ನಿಲ್ಲಿಸುವುದಿಲ್ಲ: ವಿನೇಶ್​ ಫೋಗಟ್‌ ಭಾವನಾತ್ಮಕ ಪೋಸ್ಟ್

0
24

ಬೆಂಗಳೂರು: ವಿಭಿನ್ನ ಸನ್ನಿವೇಶಗಳಲ್ಲಿ ನಾನು 2032ರವರೆಗೆ ಆಡಬಹುದು. ಏಕೆಂದರೆ ನನ್ನೊಳಗಿನ ಹೋರಾಟ ಮತ್ತು ಕುಸ್ತಿ ಯಾವಾಗಲೂ ಇದ್ದೇ ಇರುತ್ತದೆ ಎಂದು ಕುಸ್ತಿ ಪಟು ವಿನೇಶ್​ ಫೋಗಟ್‌ ಹೇಳಿದ್ದಾರೆ.


ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿ ಕೋಂಡಿದ್ದು ನಾನು ಪುಟ್ಟ ಹುಡುಗಿ. ಪುಟ್ಟ ಹಳ್ಳಿಯಿಂದ ಬಂದವಳು. ಒಲಂಪಿಕ್ಸ್​ ರಿಂಗ್​ಗಳ ಬಗ್ಗೆಯೂ ಜ್ಞಾನವಿರದ ಸಾಮಾನ್ಯ ಹುಡುಗಿಯಾಗದ್ದೆ. ನನ್ನ ತಂದೆ ಓರ್ವ ಬಸ್ ಡ್ರೈವರ್ ಆಗಿದ್ದವರು. ನಾನು ತಂದೆಯ ಫೇವರೇಟ್​ ಮಗಳು. ಯಾಕಂದ್ರೆ ನಾನೇ ಚಿಕ್ಕಮಗಳು. ನಾನು ಆಕಾಶದಲ್ಲಿ ವಿಮಾನದಲ್ಲಿ ಹಾರಬೇಕು ಅನ್ನೋ ಆಸೆ ಅಪ್ಪಂದು. ಆದ್ರೆ, ಒಂದಿನ ಅಪ್ಪ ನಮ್ಮನ್ನ ಬಿಟ್ಟು ಹೋಗ್ಬಿಟ್ರು. ನನ್ನ ತಾಯಿ ಕಷ್ಟದಿಂದ ನಮ್ಮನ್ನ ಬೆಳೆಸಿದ್ದಾರೆ. ‘ಯಾವ ಗುರಿಗಾಗಿ ಶ್ರಮಿಸಿದ್ದೇವೋ ಅದು ಪೂರ್ಣವಾಗಲಿಲ್ಲ ಎಂಬ ಭಾವ ನನ್ನ ತಂಡಕ್ಕೆ, ದೇಶವಾಸಿಗಳಿಗೆ ಮತ್ತು ನನ್ನ ಕುಟುಂಬದವರಿಗೆ ಇದೆ. ಆ ಕೊರಗು ಯಾವಾಗಲೂ ಇರುತ್ತದೆ. ಮುಂದೆ ಎಲ್ಲವೂ ಒಂದೇ ರೀತಿ ಇರುವುದಿಲ್ಲ. ವಿಭಿನ್ನ ಸನ್ನಿವೇಶಗಳಲ್ಲಿ ನಾನು 2032ರವರೆಗೆ ಆಡಬಹುದು. ಏಕೆಂದರೆ ನನ್ನೊಳಗಿನ ಹೋರಾಟ ಮತ್ತು ಕುಸ್ತಿ ಯಾವಾಗಲೂ ಇದ್ದೇ ಇರುತ್ತದೆ. ಭವಿಷ್ಯ ನನಗಾಗಿ ಏನನ್ನೂ ಯೋಜಿಸಿದೆ ಎಂದು ಊಹಿಸಲು ಸಾಧ್ಯವಿಲ್ಲ. ಈ ಪಯಣದಲ್ಲಿ ಮುಂದಿನದ್ದು ಏನಿದೆ ಎಂದೂ ಗೊತ್ತಿಲ್ಲ. ಆದರೆ ಒಂದಂತೂ ಖಚಿತ. ನಾನು ನಂಬಿರುವ ಸಂಗತಿಗಳಿಗಾಗಿ ಹೋರಾಟ ನಿಲ್ಲಿಸುವುದಿಲ್ಲ ಎಂದಿದ್ದಾರೆ.

Previous articleಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು
Next articleವಿನೇಶ್ ಫೋಗಟ್‌ಗೆ ಅದ್ದೂರಿ ಸ್ವಾಗತ