ಹುಬ್ಬಳ್ಳಿಗೆ ಬಂದಿಳಿದ ಸಿಐಡಿ ಅಧಿಕಾರಿಗಳು

0
9

ಹುಬ್ಬಳ್ಳಿ: ಸದ್ದಿಲ್ಲದೆ ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿದ್ದು, ಈಗಾಗಲೇ ಸಿಐಡಿ ಎಸ್‌ಪಿ ವೆಂಕಟೇಶ ನೇತೃತ್ವ ತಂಡ ಹುಬ್ಬಳ್ಳಿಗೆ ಬಂದಿಳಿದಿದೆ.
ಸೋಮವಾರ ಹುಬ್ಬಳ್ಳಿಗೆ ಆಗಮಿಸಿದ್ದ ಗೃಹ ಸಚಿವ ಡಾ. ಜಿ.ಪರಮೇಶ್ವರ, ಇನ್ನೆರಡು ದಿನಗಳಲ್ಲಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವುದಾಗಿ ಹೇಳಿದ್ದರು. ಆದರೆ, ಮಂಗಳವಾರ ಬೆಳಗ್ಗೆಯೇ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.
ಮಧ್ಯಾನ 3ಗಂಟೆಗೇ ಹುಬ್ಬಳ್ಳಿಗೆ ಆಗಮಿಸಿದ 9 ಜನ ಅಧಿಕಾರಿಗಳ ತಂಡ ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಮುಕ್ಕಾಂ ಹೂಡಿರುವ ಸಿಐಡಿ ಅಧಿಕಾರಿಗಳು, ಅಂಜಲಿ ಅಂಬಿಗೇರ ಕೊಲೆಗೂ ಮುನ್ನ ಠಾಣೆಗೆ ಬಂದಿದ್ದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಯಾವ ಉದ್ದೇಶಕ್ಕಾಗಿ ಅಂಜಲಿ ಠಾಣೆಗೆ ಆಗಮಿಸಿದ್ದಳು, ಯಾವ ಅಧಿಕಾರಿಯ ಜೊತೆ ಮಾತನಾಡಿದ್ದಳು, ಆಕೆಗೆ ಸ್ಪಂದಿಸಿದ ಅಧಿಕಾರಿ ಯಾರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬುಧವಾರ ಬೆಳಗ್ಗೆ 11ಗಂಟೆಯ ಹೊತ್ತಿಗೆ ಅಂಜಲಿ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ಭೇಟಿ ನೀಡಲಿದ್ದು, ತನಿಖೆ ಕೈಗೊಳ್ಳಲಿದ್ದಾರೆ. ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನೂ ಇದೇ ತಂಡ
ತನಿಖೆ ನಡೆಸುತ್ತಿದೆ.

Previous articleತಮಿಳುನಾಡಿಗೆ 2.5 ಟಿಎಂಸಿ ಕಾವೇರಿ ನೀರು ಹರಿಸಲು ಸೂಚನೆ
Next articleಎಲ್ಲಾ ಧರ್ಮದವರೂ ಒಂದೇ ತಾಯಿಯ ಮಕ್ಕಳಂತೆ ಇರಬೇಕು