ಹಿಂಡಲಗಾ ಜೈಲು ಸೇರಿದ ಪ್ರದೂಶ್

0
18

ಬೆಳಗಾವಿ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೂಶ್‌ನನ್ನು ಗುರುವಾರ ಮಧ್ಯಾಹ್ನ ಇಲ್ಲಿನ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.
ಪ್ರಕರಣದ ೧೪ನೇ ಆರೋಪಿ ಪ್ರದೂಶ್ ಬ್ಲ್ಯಾಂಕೆಟ್ ಹಾಗೂ ಬ್ಯಾಗ್ ಸಮೇತ ಬಂದು ಜೈಲು ಸೇರಿದ್ದಾನೆ. ಭದ್ರತಾ ಸಿಬ್ಬಂದಿ ಅರೋಪಿಯ ಬ್ಯಾಗನ್ನು ಸಂಪೂರ್ಣ ಪರಿಶೀಲಿಸಿದರು. ಬ್ಲ್ಯಾಂಕೆಟ್ ಅನ್ನು ಒಳಗೆ ತೆಗೆದುಕೊಂಡು ಹೋಗಲು ನಿರಾಕರಿಸಿದರು. ಬ್ಯಾಗಿನಲ್ಲಿ ಔಷಧಿ ಬಾಟಲಿ ಇದ್ದು, ವೈದ್ಯರ ಸಲಹೆ ಮೇರೆಗೆ ಕೊಡುತ್ತೇವೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು.

Previous articleKset-24 ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
Next articleಎಲೆಕ್ಟ್ರಿಕಲ್ ಆಟೋ ವಿರುದ್ಧ ಬೀದಿಗಿಳಿದ ರಿಕ್ಷಾ ಚಾಲಕರು