ಪಣಜಿ: ಯುನೈಟೆಡ್ ಕಿಂಗ್‌ಡಮ್‌ನ ಸ್ವಿಂಡನ್ ಕೌನ್ಸಿಲ್‌ನ ಮೇಯರ್ ಆಗಿ ಇಮ್ತಿಯಾಜ್ ಶೇಖ್ ಆಯ್ಕೆಯಾಗಿದ್ದಾರೆ. ಶೇಖ್ ಅವರು ಮೇಯರ್ ಆಗಿ ನೇಮಕಗೊಂಡ ಮೊದಲ ಭಾರತೀಯ ಮತ್ತು ಗೋಮಾಂತಿಕ ಮೂಲದವರು.
ಶೇಖ್ ಈ ಹಿಂದೆ ಸ್ವಿಂಡನ್‌ನ ಉಪ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಮಾಜಿ ಮೇಯರ್ ಬಾರ್ಬರಾ ಪ್ಯಾರಿ ನಂತರ ಈಗ ಮೇಯರ್ ಆಗಿ ನೇಮಕಗೊಂಡಿದ್ದಾರೆ. ಅವರ ಪತ್ನಿ ಅಡೋರಾಬೆಲ್ಲೆ-ಅಮರಲ್ ಶೇಖ್ ಸ್ವಿಂಡನ್ ಕೌನ್ಸಿಲರ್ ಆಗಿದ್ದಾರೆ.
೨೦೦೫ರಲ್ಲಿ ಗೋವಾದ ವಾಸ್ಕೋದಿಂದ ಸ್ವಿಂಡನ್‌ಗೆ ತೆರಳಿದ ಶೇಖ್, ಒಂದು ವರ್ಷದ ಕಾಲ ಈ ಹುದ್ದೆಯಲ್ಲಿದ್ದರು. ಚುನಾವಣೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶೇಖ್, ಭಾರತೀಯ ಹಾಗೂ ಗೋವೇಕರ ಆದ ನನಗೆ ನೀಡಿದ ಗೌರವಕ್ಕೆ ಇಲ್ಲಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಇದು ನನಗೆ ದೊಡ್ಡ ಗೌರವ. ಮುಂದೆಯೂ ಇಲ್ಲಿನ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನ ಮುಂದೆ ದೊಡ್ಡ ಸವಾಲುಗಳಿವೆ. ಜನರ ಆಶೀರ್ವಾದದಿಂದ ಎಲ್ಲವನ್ನೂ ಜಯಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
























