ಸ್ನಾನಕ್ಕೆಂದು ನದಿಗೆ ತೆರಳಿದ ಯುವಕ ಸಾವು

0
13

ಶೃಂಗೇರಿ: ನದಿಯಲ್ಲಿ ಸ್ನಾನಕ್ಕೆಂದು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಯಡದಳ್ಳಿ ಗ್ರಾಮದಲ್ಲಿ ನಡೆದಿದೆ.

ಮರಡಿನ ಬೈಲು ಗ್ರಾಮದ ಸುರೇಶ್ ಹಾಗೂ ಲಕ್ಷ್ಮಿ ಅವರ ಪುತ್ರ ನಿತಿನ್ (23) ನೀರಿನಲ್ಲಿ ಮುಳುಗಿ ಮೃತ ಪಟ್ಟ ಯುವಕ.

ನಿತಿನ್ ಸೇರಿದಂತೆ 6 ಜನ ಯುವಕರ ತಂಡ ಯಡದಳ್ಳಿ ಗ್ರಾಮದ ನಳಿನಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದಾಗ ಆಕಸ್ಮಿಕವಾಗಿ ನದಿಯ ನೀರಿನಲ್ಲಿ ನಿತಿನ್ ಮುಳುಗಿ ಮೃತಪಟ್ಟಿದ್ದಾನೆ.

ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleದಾಖಲೆ ಇಲ್ಲದ 13.10 ಲಕ್ಷ ಹಣ ವಶ
Next articleಕನ್ನಡದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ