ಸುವರ್ಣ ಸೌಧಕ್ಕೆ ರೈತ ಸಂಘಟನೆಗಳಿಂದ ಮುತ್ತಿಗೆ

0
24

13ರಂದು ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ರೈತರಿಂದ ಅಧಿವೇಶನದ ವೇಳೆ ಮುತ್ತಿಗೆ ಕಾರ್ಯಕ್ರಮ

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಿ.13ರಂದು ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಸರ್ಕಾರ ರೈತ ಪರ ಎಂದು ಪದೇ ಪದೇ ಹೇಳುತ್ತಾರೆ. ಜೊತೆಗೆ ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದಾಗ ನಮ್ಮೊಂದಿಗೆ ಸಭೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈಗ ಈ ಬಗ್ಗೆ ಮೌನ ವಹಿಸಿದ್ದಾರೆ ಎಂದರು.
ಸಕ್ಕರೆ ವಿಷಯದಲ್ಲಿ ಕಬ್ಬಿನ ಬೆಲೆ ನಿಗದಿ ವೇಳೆ ಉತ್ಪನ್ನ ಪ್ರಮಾಣವನ್ನು ಶೆ.9.5ರಿಂದ 10.5ಕೆ ಏರಿಸಿ 10 ಕೆಜಿ ಸಕ್ಕರೆ ವಂಚನೆ ಮಾಡಿದೆ. ಕೇಂದ್ರ ಸರ್ಕಾರ ಎಫ್ ಆರ್ ಪಿ ದರದಲ್ಲೇ ಖರೀದಿ ಮಾಡಬೇಕು ಎಂದು ಹೇಳಿದ್ದಾರೆ ಆದರೆ ರಾಜ್ಯ ಸರ್ಕಾರ ಎಸ್ ಏ ಪಿ ದರದಲ್ಲಿ ಖರೀದಿ ಮಾಡುತ್ತಿದೆ ಇಂದು ಅವರು ಕಿಡಿಕಾರಿದರು
ಇನ್ನು ವಕ್ಫ್ ಬೋರ್ಡ್ ಹೆಸರು ಪಹಣಿಯಲ್ಲಿ ಬಂದ ಮೇಲೆ ಆದೇಶ ರದ್ದು ಮಾಡಿದ್ದಾಗಿ ಸಿಎಂ ಹೇಳಿದರು. ಆದರೆ, ಈಗಾಗಲೇ ಪಹಣಿಯಲ್ಲಿ ಹೆಸರು ಬಂದವರು ಸಾಕಷ್ಟು ಸಮಸ್ಯೆ ಬಂದಿವೆ. ವಕ್ಫ್ ಎಂಬ ಹೆಸರು ಪಹಣಿ ಯಿಂದ ತೆಗೆಯಲು ಜಿಲ್ಲಾಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದರು.
ಬಗರ್ ಹುಕ್ಕುಂ ಜಮೀನುಗಳ ಹಕ್ಕುಪತ್ರ ನೀಡಲು ಕ್ರಮ ವಹಿಸಬೇಕು. ಎಂಎಸ್ಪಿ ವಿಷಯದಲ್ಲಿ ಕೇಂದ್ರ ಸರ್ಕಾರ ರೈತರನ್ನು ಮರಳು ಮಾಡಲು ಹೊರಟಿದೆ. ನಾವು ಕೇಳುತ್ತಿರುವುದು ಎಂ.ಎಸ್. ಸ್ವಾಮಿನಾಥನ್ ವರದಿ ಆಧರಿಸಿ ಸಿ2+50% ಬಲೆಯನ್ನು ಶಾಸನ ಬದ್ಧವಾಗಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಕಾರ್ಯದರ್ಶಿ ಮಲ್ಲಶೆಟ್ಟಿ ಹಳ್ಳಿ ಚನ್ನಬಸಪ್ಪ, ಜಿಲ್ಲಾಧ್ಯಕ್ಷ ಶತಕೋಟಿ ಬಸಣ್ಣ, ಕಾರ್ಯಾಧ್ಯಕ್ಷ ಚಿನ್ನಸಮುದ್ರ ಶೇಖರ್ ನಾಯ್ಕ, ಪ್ರಧಾನ ಕಾರ್ಯದರ್ಶಿ ದಾಗಿನಕಟ್ಟೆ ಬಸವರಾಜ್, ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಮಂಡಲೂರು, ನಕ್ಕುದ್ರೆ ಚನ್ನಬಸಪ್ಪ ಇದ್ದರು.

Previous article‘ಮೋದಿ ಅದಾನಿʼ ಮುಖವಾಡ ಧರಿಸಿ ಅಣಕು ಪ್ರತಿಭಟನೆ ..
Next articleಸುಧಾರಣೆ, ಸಾಧನೆ, ಪರಿವರ್ತನೆಯ ಮಂತ್ರದೊಂದಿಗೆ ಭಾರತವು ವಿಕಾಸದೆಡೆಗೆ