ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರಿಂದ ಚೊಂಬು; ಬಂಡೆಪ್ಪ ಕಾಶೆಂಪುರ

0
11

ಹುಬ್ಬಳ್ಳಿ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷಕ್ಕೆ ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ಚೊಂಬು ನೀಡಲಿದ್ದಾರೆ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಸಭಾ ಚುನಾವಣೆ ವೇಳೆ ಗ್ಯಾರಂಟಿ ಯೋಜನೆಗಳನ್ನು ನಂಬಿ ಜನರು ಕಾಂಗ್ರೆಸ್ ಮತ ಹಾಕಿ ಕೈ ಹಿಡಿದರು. ಆದರೆ, ಅನುಷ್ಠಾನ ಸರಿಯಾಗಿ ಮಾಡಲಿಲ್ಲ. ಹೇಳಿದ್ದೊಂದು ಮಾಡಿದ್ದೊಂದು ಮಾಡಿದರು. ಹನ್ನೊಂದು ತಿಂಗಳದ ಕಾಂಗ್ರೆಸ್ ಪಕ್ಷದ ಆಡಳಿತ ಜನರ ವಿಶ್ವಾಸ ಕಳೆದುಕೊಂಡಿದೆ. ಗ್ಯಾರಂಟಿ ವರ್ಕಔಟ್ ಆಗುವುದಿಲ್ಲವೆಂದು ಅರಿತ ಕಾಂಗ್ರೆಸ್‌ನವರು `ಚೊಂಬಿನ ಜಾಹಿ Ãರಾತು' ನೀಡಿ ರಾಜ್ಯದ ಜನರ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದಾರೆ. ಆದರೆ, ಚುನಾವಣೆಯಲ್ಲಿ ರಾಜ್ಯದ ಜನರೇ ಕಾಂಗ್ರೆಸ್‌ಗೆ ಚೊಂಬು ನೀಡಲಿದ್ದಾರೆ. ಯಾವ ರೀತಿಯ ಚೊಂಬು ನೀಡಬೇಕು ಎಂಬ ಬಗ್ಗೆ ನಿರ್ಧಾರ ಮಾಡುತ್ತಿದ್ದಾರೆ ಎಂದು ಕಾಶೆಂಪುರ ಹೇಳಿದರು.

Previous articleಆಪ್ ಪ್ರಚಾರ ಗೀತೆ ಬಿಡುಗಡೆ: ಜೈಲ್ ಕೆ ಜವಾಬ್ ಮೇ ಹಮ್ ವೋಟ್ ದೇಂಗೆ…
Next articleಮೋದಿ ಭೇಟಿಗಾಗಿ ಸಮಯ ಕೇಳಿದ ಖರ್ಗೆ