ರಾಹುಲ್ ಮಕ್ಕಳ ನಡವಳಿಕೆಯನ್ನು ಪ್ರದರ್ಶಿಸುತ್ತಿದ್ದಾರೆ

0
31

ಬೆಂಗಳೂರು: ಕಾಂಗ್ರೆಸ್‌ ನಾಯಕ್‌ ರಾಹುಲ್ ಗಾಂಧಿ ಮಕ್ಕಳ ನಡವಳಿಕೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ವಿದೇಶ ಪ್ರವಾಸ ಮಾಡಿದಾಗಲೆಲ್ಲ ರಾಹುಲ್ ಗಾಂಧಿಯವರು ಭಾರತದ ಪ್ರಜಾಪ್ರಭುತ್ವ ಹಾಗೂ ವಿವಿಧ ಸಂಸ್ಥೆಗಳನ್ನು ಟೀಕಿಸುವ ಪ್ರವೃತ್ತಿಯನ್ನು ಕೊನೆಗೊಳಿಸಬೇಕು. ಕ್ರಿಕೆಟ್ ಆಟದಲ್ಲಿ ಔಟ್ ಆದಾಗ ಮಕ್ಕಳು ಬ್ಯಾಟ್ ನೀಡದೇ ತೋರುವ ನಡವಳಿಕೆಯನ್ನು ರಾಹುಲ್ ಗಾಂಧಿ ಪ್ರದರ್ಶಿಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಮ್ಮ ಹಿಂದಿನ ದಾಖಲೆಗಳನ್ನೊಮ್ಮೆ ಪರಿಶೀಲಿಸುವುದು ಉತ್ತಮ.

  1. ಸುಮಾರು ವರ್ಷಗಳಿಂದಲೂ ಚುನಾವಣಾ ಆಯುಕ್ತರನ್ನು ಪ್ರಧಾನ ಮಂತ್ರಿಯೇ ಆಯ್ಕೆ ಮಾಡುತ್ತಿದ್ದರು, ಚುನಾವಣಾ ದಿನಾಂಕಗಳಿಗಾಗಿ ಆಯೋಗವು ಪ್ರಧಾನಿಯನ್ನು ಸಂಪರ್ಕಿಸುತ್ತಿತ್ತು.
  2. ಚುನಾವಣಾ ಆಯೋಗದ ಅಧಿಕಾರಿಗಳು 10 ಜನಪಥ್‌ನಿಂದ ನೇರವಾಗಿ ಸೂಚನೆಗಳನ್ನು ಪಡೆಯುತ್ತಿದ್ದರೆ ಹೊರೆತು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.
  3. 1991 ರಲ್ಲಿ, ರಾಜೀವ್ ಗಾಂಧಿಯವರ ಹತ್ಯೆಯ ನಂತರ, ಚುನಾವಣೆಗಳನ್ನು ಮುಂದೂಡಲಾಯಿತು – ಇದು ಸಾರ್ವಜನಿಕರ‌ ಹಣ‌ ಪೋಲಾಗಿದ್ದು ನೆನಪಿಸಿಕೊಳ್ಳಬೇಕು ಎಂದಿದ್ದಾರೆ.
Previous articleತಾಳಿ ತೆಗೆದರೆ ತಪ್ಪಿಲ್ಲ…? ಜನಿವಾರ ತೆಗೆದರೆ ತಪ್ಪು…!
Next articleಒಂದೇ ಚಿತ್ರದಲ್ಲಿ ರಿಷಿ, ಅಭಿಮನ್ಯು ಕಮಾಲ್