ಮಾಜಿ ಸಿಎಂ ದಿ. ಕರ್ಪೂರಿ ಠಾಕೂರ್‌ಗೆ ಭಾರತ ರತ್ನ ಗೌರವ

0
13

ದೆಹಲಿ: ಸ್ವಾತಂತ್ರ್ಯ ಹೋರಾಟ ಮತ್ತು ಸಮಾಜವಾದಿ ಆಂದೋಲನಕ್ಕೆ ಅನನ್ಯ ಕೊಡುಗೆ ನೀಡಿದ ಬಿಹಾರದ ಮಾಜಿ ಸಿಎಂ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಸಮತಾವಾದದ ಅಗ್ರ ನಾಯಕನಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಿರುವುದಾಗಿ ರಾಷ್ಟ್ರಪತಿ ಭವನದಿಂದ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಈ ಮಾಹಿತಿ ಹಂಚಿಕೊಂಡಿದೆ.
ಜನ ನಾಯಕರಾಗಿದ್ದ ಕರ್ಪೂರಿ ಠಾಕೂರ್‌ ಎರಡು ಬಾರಿ(1970 ರಿಂದ 1971 ಹಾಗೂ 1977 ರಿಂದ 1979) ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಕ್ವಿಟ್‌ ಇಂಡಿಯಾ ಇಂಡಿಯಾ ಚಳವಳಿಯಲ್ಲಿ ಸೆರೆವಾಸ ಅನುಭವಿಸಿದ್ದರು.
ಜನವರಿ 24ರಂದು ಕರ್ಪೂರಿ ಠಾಕೂರ್ ಅವರ 100ನೇ ಜನ್ಮದಿನಾಚರಣೆಯಿದ್ದೂ, ಅದಕ್ಕೂ ಒಂದು ದಿನ ಮುನ್ನವೇ ರಾಷ್ಟ್ರಪತಿ ಭವನ ಠಾಕೂರ್​ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ಘೋಷಿಸಿದೆ.

Previous articleಐಟಿ ಅಧಿಕಾರಿಗಳ ದಾಳಿ
Next articleದೇವರ ಗುಡಿ ಪ್ರವೇಶಕ್ಕೆ ಅಡ್ಡಿ ಸಲ್ಲ