ಮಹಿಳಾ ಕ್ರಿಕೆಟ್: ವಿಜಯಪುರದ ಪ್ರಿಯಾ ಶಂಕರ ಚವ್ಹಾಣ್ ಆಯ್ಕೆ

0
118

ವಿಜಯಪುರ: ‘ಕರ್ನಾಟಕ ರಾಜ್ಯ ಅಂಡರ್ 19’ ಮಹಿಳಾ ಕ್ರಿಕೆಟ್ ತಂಡಕ್ಕೆ BLDE ಸಂಸ್ಥೆಯ S.S.A ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪ್ರಿಯಾ ಶಂಕರ ಚವ್ಹಾಣ್ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ವಿಜಯಪುರದ ಕೀರ್ತಿ ಹೆಚ್ಚಿಸಿರುವ ಈ ಬಾಲಕಿಗೆ ಅಭಿನಂದನೆಗಳು. ಜನವರಿ 4ರಿಂದ 12ರವರೆಗೆ ಗುಜರಾತಿನನಲ್ಲಿ ನಡೆಯಲಿರುವ ಅಂತಾರಾಜ್ಯ ಏಕದಿನ ಸರಣಿಯಲ್ಲಿ ಮಹಾರಾಷ್ಟ್ರ, ವಿದರ್ಭ, ಅಸ್ಸಾಂ, ಮಿಜೋರಾಂ ಹಾಗೂ ಚಂಡಿಗಡ ತಂಡಗಳ ವಿರುದ್ಧ ಆಡಲಿದ್ದಾಳೆ. 2023ರಲ್ಲಿ ಈ ಬಾಲಕಿ ಅಂಡರ್ 19 ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣ ಈಗ ಪುನಃ ಆಯ್ಕೆಯಾಗಿರುವುದು ಮತ್ತಷ್ಟು ಹೆಮ್ಮೆಯ ಸಂಗತಿ. ಈ ಬಾರಿಯ ಸರಣಿ ಪಂದ್ಯಾವಳಿಗಳಲ್ಲೂ ಶ್ರೇಷ್ಠ ಸಾಧನೆ ಮಾಡಿ ಮುಂಬರುವ ದಿನಗಳಲ್ಲಿ ಭಾರತ ಮಹಿಳಾ ತಂಡಕ್ಕೂ ಆಯ್ಕೆಯಾಗಿ ರಾಜ್ಯಕ್ಕೂ ಹೆಮ್ಮೆ ತರುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

Previous articleಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ, ಸಿಪಿಎಂ ನಾಯಕ ಬಯ್ಯಾರೆಡ್ಡಿ ನಿಧನ
Next articleಲೇಖಕ ಪ್ರೊ.ಮುಜಾಫರ್‌ ಅಸ್ಸಾದಿ ನಿಧನ