ವಿಜಯಪುರ: ‘ಕರ್ನಾಟಕ ರಾಜ್ಯ ಅಂಡರ್ 19’ ಮಹಿಳಾ ಕ್ರಿಕೆಟ್ ತಂಡಕ್ಕೆ BLDE ಸಂಸ್ಥೆಯ S.S.A ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪ್ರಿಯಾ ಶಂಕರ ಚವ್ಹಾಣ್ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವಿಜಯಪುರದ ಕೀರ್ತಿ ಹೆಚ್ಚಿಸಿರುವ ಈ ಬಾಲಕಿಗೆ ಅಭಿನಂದನೆಗಳು. ಜನವರಿ 4ರಿಂದ 12ರವರೆಗೆ ಗುಜರಾತಿನನಲ್ಲಿ ನಡೆಯಲಿರುವ ಅಂತಾರಾಜ್ಯ ಏಕದಿನ ಸರಣಿಯಲ್ಲಿ ಮಹಾರಾಷ್ಟ್ರ, ವಿದರ್ಭ, ಅಸ್ಸಾಂ, ಮಿಜೋರಾಂ ಹಾಗೂ ಚಂಡಿಗಡ ತಂಡಗಳ ವಿರುದ್ಧ ಆಡಲಿದ್ದಾಳೆ. 2023ರಲ್ಲಿ ಈ ಬಾಲಕಿ ಅಂಡರ್ 19 ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣ ಈಗ ಪುನಃ ಆಯ್ಕೆಯಾಗಿರುವುದು ಮತ್ತಷ್ಟು ಹೆಮ್ಮೆಯ ಸಂಗತಿ. ಈ ಬಾರಿಯ ಸರಣಿ ಪಂದ್ಯಾವಳಿಗಳಲ್ಲೂ ಶ್ರೇಷ್ಠ ಸಾಧನೆ ಮಾಡಿ ಮುಂಬರುವ ದಿನಗಳಲ್ಲಿ ಭಾರತ ಮಹಿಳಾ ತಂಡಕ್ಕೂ ಆಯ್ಕೆಯಾಗಿ ರಾಜ್ಯಕ್ಕೂ ಹೆಮ್ಮೆ ತರುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.