ಮಹಾಕುಂಭ ಒಂದು ಆಧ್ಯಾತ್ಮಿಕ ಅನುಭವ

0
20

ಇಲ್ಲಿ ಪವಿತ್ರ ಸ್ನಾನ ಮಾಡುವುದು ನಮಗೆ ಅಲೌಕಿಕ ಶಕ್ತಿಗಳನ್ನು ಒಟ್ಟುಗೂಡಿಸುವ ಅವಕಾಶ

ಪ್ರಯಾಗ್‌ರಾಜ್‌: ಮಹಾಕುಂಭ ಮೇಳ 2025 ನಡೆಯುತ್ತಿರುವ ಪ್ರಯಾಗ್ ರಾಜ್‌ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಉತ್ಸವ, ಹಿಂದೂ ಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆಯಾಗಿ ಯಶಸ್ವಿಯಾಗಿ ಜರಗುತ್ತಿರುವ ಪ್ರಯಾಗರಾಜದ ಮಹಾಕುಂಭದಲ್ಲಿ ಇಂದು ಕುಟುಂಬ ಸಹಿತ ಪಾಲ್ಗೊಂಡು ಪವಿತ್ರ ಸ್ನಾನ ಮಾಡುವ ಸುವರ್ಣ ಅವಕಾಶ ನನ್ನದಾಯಿತು. ಇದು ನನಗೆ ಅತ್ಯಂತ ದೈವಿಕ ಕ್ಷಣ. ಮಹಾಕುಂಭ ಒಂದು ಆಧ್ಯಾತ್ಮಿಕ ಅನುಭವ. ಇಲ್ಲಿ ಪವಿತ್ರ ಸ್ನಾನ ಮಾಡುವುದು ನಮಗೆ ಅಲೌಕಿಕ ಶಕ್ತಿಗಳನ್ನು ಒಟ್ಟುಗೂಡಿಸುವ ಅವಕಾಶ. ಕುಂಬಮೇಳವು ಭವ್ಯವಾದ ಯಶಸ್ಸು, ನಂಬಿಕೆ ಮತ್ತು ಸಂಸ್ಕೃತಿಯ ಆಚರಣೆಯನ್ನಾಗಿದ್ದು ಈಗಾಗಲೇ ಕೋಟಿ ಕೋಟಿ ಜನರು ಈ ಪಾವನ ಉತ್ಸವದಲ್ಲಿ ಪಾಲ್ಗೊಂಡು ಪುನಿತರಾಗಿದ್ದಾರೆ. ಹರ ಹರ ಮಹಾದೇವ ಎಂದಿದ್ದಾರೆ.

Previous articleಕಂಟ್ರಿ ಪಿಸ್ತೂಲ್ ಪೊಲೀಸರ ವಶ
Next articleಬಾಲ್ ಬ್ಯಾಡ್ಮಿಂಟನ್ ಕ್ರೀಡೆಗೆ ಮರುಜೀವ ನೀಡಲು ಮುಂದಾದ ಸುಂದರ್‌ರಾಜ್