ಮರುಮೌಲ್ಯಮಾಪನದ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ದೀಕ್ಷಾ

0
30

ಶಿವಮೊಗ್ಗ: ಏಪ್ರಿಲ್ 08 ರಂದು ಬಂದ ದ್ವಿತೀಯ ಪಿಯುಸಿ ಪಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 599 ಅಂಕ ಪಡೆದಿದ್ದ ತೀರ್ಥಹಳ್ಳಿ ತಾಲೂಕಿನ ವಿದ್ಯಾರ್ಥಿನಿ ದೀಕ್ಷಾ ಮರು ಮೌಲ್ಯಮಾಪನದ ನಂತರ ಈಗ 600ಕ್ಕೆ 600 ಅಂಕ ಗಳಿಸಿ, ವಿಜ್ಞಾನ ವಿಭಾಗದಲ್ಲಿ ಮೊದಲ ಟಾಪರ್ ಆಗಿದ್ದಾರೆ. ಕೆಮಿಸ್ಟ್ರಿ ಯಲ್ಲಿ ಈ ಮೊದಲು 100 ಕ್ಕೆ 99 ಅಂಕ ನೀಡಲಾಗಿತ್ತು. ಮರುಮೌಲ್ಯಮಾಪನಕ್ಕೆ ದೀಕ್ಷಾ ಅರ್ಜಿ ಹಾಕಿದ್ದರು. ಮರು ಮೌಲ್ಯಮಾಪನದಲ್ಲಿ 100ಕ್ಕೆ 100 ಅಂಕ ಸಿಕ್ಕಿದ್ದು ಈ ಬಾರಿಯ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಹೊಸ ದಾಖಲೆ ಬರೆದಿದ್ದಾರೆ. ವಿದ್ಯಾರ್ಥಿನಿ ದೀಕ್ಷಾ ವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ವಾಗ್ದೇವಿ ಪಿಯು ಕಾಲೇಜನಲ್ಲಿ ವ್ಯಾಸಾಂಗ ಮಾಡಿದ್ದಾರೆ.

Previous articleKRS ‘ಕಾವೇರಿ ಆರತಿ’ಗೆ ಶೀಘ್ರದಲ್ಲಿ ನೀಲನಕ್ಷೆ
Next articleಸಾರ್ವಕರ್ ಕುರಿತ ರಾಹುಲ್ ಗಾಂಧಿ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ