ಭಿತ್ತಿಪತ್ರ ಅಂಟಿಸುವ ಯುವಕ ನೀರುಪಾಲು

0
17

ಇಳಕಲ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ ಆಕಾಂಕ್ಷಿಯ ಭಿತ್ತಿಪತ್ರಗಳನ್ನು ಅಂಟಿಸಲು ಹೊರಟ ಯುವಕನೊಬ್ಬ ನೀರು ಪಾಲಾದ ಪ್ರಕರಣ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಬಲಕುಂದಿ ಗ್ರಾಮದ ಬಳಿ ನಡೆದಿದೆ.
ಹುನಗುಂದ ತಾಲೂಕಿನ ಅಮೀನಗಡ ಗ್ರಾಮದ ೧೭ ವರ್ಷದ ಸಿದ್ದು ಶಿವಪ್ಪ ಕಂಗಳ ಎಂಬ ಯುವಕ ಸಹಚರರೊಂದಿಗೆ ಅಭ್ಯರ್ಥಿಯ ಭಿತ್ತಿಪತ್ರ ಅಂಟಿಸುತ್ತಾ ಬಲಕುಂದಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ಸ್ನಾನಕ್ಕೆಂದು ಹೋದಾಗ ನೀರು ಪಾಲಾಗಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleವಿಶ್ವಕಪ್‌ ಕ್ರಿಕೆಟ್: ಭಾರತದ ಗೆಲುವಿಗಾಗಿ ಇಳಕಲ್‌ನಲ್ಲಿ ಪೂಜೆ
Next articleಕುಮಾರಸ್ವಾಮಿಯವರು ಅವರ ಸರ್ಕಾರದ ವ್ಯವಹಾರವನ್ನು ಈಗ ಹೇಳುತ್ತಿದ್ದಾರೆ