ಬ್ಯಾನರ್‌ನಲ್ಲಿ ಭಾವಚಿತ್ರ ಮಾಯ: ಆಕ್ರೋಶ

0
48

ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಭಾವಚಿತ್ರದ ಬ್ಯಾನರ್, ಕಟೌಟ್ ಅಳವಡಿಸಿಲ್ಲ ಎಂದು ತಗಾದೆ

ಕಲಬುರಗಿ: ಜಯದೇವ ಹೃದ್ರೋಗ ಆಸ್ಪತ್ರೆಯ ಕಲಬುರಗಿ ಶಾಖೆ ಉದ್ಘಾಟನೆ ಸಮಾರಂಭಕ್ಕೂ ಮುನ್ನವೇ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಬೆಂಬಲಿಗ ಲಿಂಗರಾಜ ಕಣ್ಣಿ ನೇತೃತ್ವದಲ್ಲಿ ಅಭಿಮಾನಿಗಳು ಸ್ಥಳೀಯ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಭಾವಚಿತ್ರದ ಬ್ಯಾನರ್, ಕಟೌಟ್ ಅಳವಡಿಸಿಲ್ಲ ಎಂದು ತಗಾದೆ ತೆಗೆದು ಆಸ್ಪತ್ರೆ ಮುಖ್ಯ ದ್ವಾರ ಮುಂದೆ‌ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಮುಖ್ಯ ವೇದಿಕೆ ಕಾರ್ಯಕ್ರಮದ ಬ್ಯಾನರ್ ನಲ್ಲಿ ಪೋಟೊ ಇದ್ದರೂ ಮುಖ್ಯದ್ವಾರ ಹಾಗೂ ಮುಖ್ಯ ರಸ್ತೆಯ ಕೆಲ ಕಡೆಗಳಲ್ಲಿ ಇರುವುದಕ್ಕೆ ಆಕ್ಷೇಪಣೆ ಮಾಡಿರುವುದಕ್ಕೆ ತಹಸೀಲ್ದಾರ ಆನಂದಶೀಲ ಮನವೊಲಿಸಿ ಸಮಾಧಾನ ಪಡಿಸಿದ್ದಾರೆ.

Previous articleಲಾಠಿ ಬೀಸಿದವರಿಗೆ 10ಸಾವಿರ ಬಹುಮಾನ
Next articleU19 ಏಷ್ಯಾಕಪ್​: ಚಾಂಪಿಯನ್ ಆದ ಭಾರತ