ಬಿಗ್ ಬಾಸ್ ವಿನ್ನರ್ ಹನುಮಂತಗೆ ಅದ್ಧೂರಿ ಸ್ವಾಗತ

0
51

ಹಾವೇರಿ: ಬಿಗ್ ಬಾಸ್ ವಿನ್ನರ್ ಆಗಿ ತವರೂರು ಜಿಲ್ಲೆಯ ಸವಣೂರು ಪಟ್ಟಣಕ್ಕೆ ಗುರುವಾರ ಆಗಮಿಸಿದ ಹನುಮಂತ ಲಮಾಣಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಸವಣೂರು ಪಟ್ಟಣದ ಭರತ ದೇವರು ವೃತ್ತದಲ್ಲಿ ನೂರಾರು ಸಂಖ್ಯೆಯ ಅಭಿಮಾನಿಗಳು ಶಾಲು,ಹೂವಿನ ಹಾರ ಹಾಕಿ ಸ್ವಾಗತಿಸಿದರು. ಬಳಿಕ ಪಟ್ಟಣದಲ್ಲಿ ತಾನೇ ಹಾಡಿದ ಡಿಜೆ ಹಾಡಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ನೂರಾರು ಅಭಿಮಾನಿಗಳು ಹನುಮಂತ ಲಂಬಾಣಿ ಡಿಜೆ ಹಾಡುಗಳಿಗೆ ನೃತ್ಯ ಮಾಡಿದರು. ಸದ್ಯ ಹನುಮಂತ ಲಮಾಣಿ ಸವಣೂರಿ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಸಂಭ್ರಮಾಚರಣೆ ಮುಗಿಲು‌ಮುಟ್ಟಿದೆ.

ಹಾಸ್ಯ ಚಟಾಕಿ ಹಾರಿಸಿದ ಹನುಮಂತ..

ಪ್ರೀತಿ ಅಭಿಮಾನದಿಂದ  ವೋಟ್ ಹಾಕಿ ಗೆಲ್ಲಿಸಿದ್ದಿರಿ ಎಂದು ಧನ್ಯವಾದ ತಿಳಿಸಿದ ಹನುಮಂತ, ಮೂರು ತಿಂಗಳು ಬಿಗ್ ಬಾಸ್ ಮನೆಯಲ್ಲಿ ಇದ್ದು ಕಿವಿ ಕೇಳದಂತಾಗಿದೆ.

ಇದೀಗ ಮತ್ತೆ ಡಿಜೆ ಹಚ್ಚಿ ಬಾಳ ಸೌಂಡು ಬಿಟ್ಟಿದ್ದಾರೆ ಎಂದು ನಗೆ ಚಟಾಕಿ ಹಾರಿಸಿದರು.

ಅಭಿಮಾನಿಗಳಿಗೋಸ್ಕರ ಯವ್ವ ಎಂದು ಕೂಗುವ ಮೂಲಕ ಈ ಸಲ ಕಪ್ ನಮ್ದೇ ಎಂದು ಹೇಳಿದರು.

ಹನುಮಂತನ ಮಾತಿಗೆ ಅಭಿಮಾನಿಗಳು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

Previous articleಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆಗೆ ಯತ್ನ: ಮೂವರ ಬಂಧನ
Next articleಕಾಲೇಜು ವಿದ್ಯಾರ್ಥಿನಿಯ ಕತ್ತು ಕೊಯ್ದು ಬರ್ಬರ ಹತ್ಯೆ: ಓರ್ವನ ಬಂಧನ