ಫೀಲ್ಡಿಗಿಳಿದ ಪಾಲಿಕೆ ಆಯುಕ್ತ: 50ಲಕ್ಷ ಮೌಲ್ಯದ 35 ಟನ್ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ

0
16

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಂಗಳವಾರ ಫೀಲ್ಡಿಗಿಳಿದಿದ್ದು, 35ಟನ್‌ಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ವಶ ಪಡಿಸಿಕೊಂಡಿದ್ದಾರೆ.
ಗೋಕುಲ ರಸ್ತೆಯ ಇಂಡಸ್ಟ್ರಿಯಲ್ ಏರಿಯಾದಲ್ಲಿನ ರಜನಿ ಪಾಲಿಪ್ಯಾಕ್ ಪ್ರೈ.ಲೀ ಗೊಡೌನ್ ಮತ್ತು ಪ್ಲಾಸ್ಟಿಜ್ ತಯಾರಿಕಾ ಘಟಕದ ಮೇಲೆ ಸ್ವತಃ ಆಯುಕ್ತರೇ ದಾಳಿ ನಡೆಸಿದ್ದಾರೆ. ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಎಸ್ ಡಬ್ಲೂಎಂ ಅಧಿಕಾರಿ ಮಲ್ಲಿಕಾರ್ಜುನ, ವಲಯ ಆಯುಕ್ತ ಗಿರೀಶ ತಳವಾರ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸೋಮಶೇಖರ ಹಾಗೂ ಗೋಕುಲ ರಸ್ತೆ ಪೊಲೀಸ್ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಅಕ್ರಮ ಪ್ಲಾಸ್ಟಿಕ್ ದಾಸ್ತಾನಿಡಲಾಗಿದ್ದ ಗುಡೌನ್ ಸೀಜ್ ಮಾಡಿದ್ದಾರೆ. ಗುಡೌನ್ ಮತ್ತು ಪ್ಲಾಸ್ಟಿಕ್ ತಯಾರಿಕಾ ಘಟಕದ ಮಾಲಿಕ ಪ್ರವೀಣ ಸುರಾನ ಅವರ ಮೇಲೆ ಕ್ರಮಕ್ಕೆ ಮುಂದಾಗಿರುವ ಆಯುಕ್ತರು, ಅಂದಾಜು 50ಲಕ್ಷ ರೂ. ಮೌಲ್ಯದ ನಿಷೇಧಿತ ಪ್ಲಾಸ್ಟಿಜ್ ವಶ ಪಡಿಸಿಕೊಂಡಿದ್ದಾರೆ.

Previous articleರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೂಡಿಕೆ ಮಾಡಲು ಹಲವು ಕಂಪೆನಿಗಳ ಆಸಕ್ತಿ
Next articleಮುಡಾ ಹಗರಣ: ಸಿಎಂಗೆ ಸಪ್ತ ಪ್ರಶ್ನೆ ಹಾಕಿದ ಆರ್‌ ಅಶೋಕ್‌