ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ ನಟ ಚಂದ್ರಕಾಂತ್ ಆತ್ಮಹತ್ಯೆ!

0
6

ನಟಿ ಪವಿತ್ರಾ ಜಯರಾಮ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಗೆಳತಿಯ ಸಾವಿನಿಂದ ಸಾಕಷ್ಟು ನೊಂದಿದ್ದ ಚಂದ್ರಕಾಂತ್​ ಅಲಿಯಾಸ್​ ಚಂದು ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತನ್ನ ಕಣ್ಣೆದುರೇ ಪವಿತ್ರಾ ಜಯರಾಮ್ ಸಾವನ್ನಪ್ಪಿದ್ದನ್ನು ನೋಡಿ ನಟ ಚಂದು ಆಘಾತಕ್ಕೊಳಗಾಗಿದ್ದರು. ಅದೇ ನೋವಿನಲ್ಲಿ ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾರೆ. ಪವಿತ್ರಾ ಜಯರಾಮ್ ನಿಧನರಾದ ನಂತರ ಅವರ ಜತೆಗೆ ಕೊನೆಯದಾಗಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ಚಂದ್ರಕಾಂತ್‌ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದೆಯಲ್ಲಾ ನಾನು ಹೇಗಿರಲಿ ಎಂಬರ್ಥದಲ್ಲಿ ಅವರು ಫೋಟೋಗೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಅವರನ್ನು ಅಗಲಿದ ನೋವು ಭಾದಿಸುತ್ತಿದೆ ಎಂದು ಪೋಸ್ಟ್ ಮಾಡಿದ್ದರು. ಕಳೆದ ಕೆಲವು ದಿನಗಳಿಂದ ತೀವ್ರವಾಗಿ ನೊಂದಿದ್ದ ಅವರು, ಕೊನೆಗೆ ಹೈದರಾಬಾದ್ನ ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Previous articleಅಂಜಲಿ ಹಂತಕನ ಮೇಲೆ ಮತ್ತೊಂದು ಪ್ರಕರಣ
Next articleಕ್ಯಾಂಟರ್ ಅಡ್ಡಗಟ್ಟಿ, ಖಾರದ ಪುಡಿ ಎರಚಿ 32 ಲಕ್ಷ ರೂ. ದರೋಡೆ