ಪರೀಕ್ಷೆ: ಈ ಪ್ರಹಸನ ಅತ್ಯಂತ ಕೆಟ್ಟ ನಿರ್ಧಾರ

0
14
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಕಷ್ಟು ದೂರ ಇರುವ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯುವ ಈ ಪ್ರಹಸನ ಅತ್ಯಂತ ಕೆಟ್ಟ ನಿರ್ಧಾರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದ್ದಾರೆ.
ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಉತ್ತರ ಕರ್ನಾಟಕದ ಕಲಬುರಗಿ, ಬೆಳಗಾವಿ, ವಿಜಯಪುರ, ಗದಗ ಸೇರಿದಂತೆ ಬೆಂಗಳೂರಿನಿಂದ ಸಾಕಷ್ಟು ದೂರ ಇರುವ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯುವ ಈ ಪ್ರಹಸನ ಅತ್ಯಂತ ಕೆಟ್ಟ ನಿರ್ಧಾರ ಹಾಗೂ ಆಡಳಿತಾತ್ಮಕ ವೈಫಲ್ಯವೇ ಸರಿ. ತಂತ್ರಜ್ಞಾನ ಮುಂದುವರೆದಿರುವ ಈ ಕಾಲದಲ್ಲಿ ವಿದ್ಯಾರ್ಥಿಗಳು ೮-೯ ತಾಸು ಪ್ರಯಾಣಿಸಿ, ಇಲ್ಲಿ ಬಂದು ತಂಗಲು ಹಣ ಕೊಟ್ಟು, ಬಸ್, ಟ್ರೈನಿಗೆ ದುಡ್ಡು ಖರ್ಚು ಮಾಡಿಸುವುದು ತರವಲ್ಲ. ಈ ಕೂಡಲೇ ಈ ಆದೇಶವನ್ನು ಹಿಂಪಡೆದು, ಆಯಾ ಜಿಲ್ಲೆಗಳಲ್ಲೇ ಅಭ್ಯರ್ಥಿಗಳು, ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುವಂತಾಗಲಿ ಎಂದಿದ್ದಾರೆ.

Previous articleಸಿಲಿಂಡರ್ ಸ್ಪೋಟ: ಓರ್ವ ಮಹಿಳೆ ಸಾವು, ನಾಲ್ವರಿಗೆ ಗಾಯ
Next articleಟೆಕೆಟ್ ತಪ್ಪುವ ಭೀತಿ: ಹೋರಾಟದ ಹಾದಿ ಹಿಡಿದ ಬೆಂಬಲಿಗರು