ಪತಿ ಸಾವಿನ ಸುದ್ದಿ ಕೇಳಿ ಪತ್ನಿ ಸಾವು

0
16

ಬಳ್ಳಾರಿ: ಪತಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪತ್ನಿ ಸಹ ಮೃತಪಟ್ಟಿರುವ ಘಟನೆ ಇಲ್ಲಿನ ಕಪ್ಪಗಲ್ ರಸ್ತೆಯಲ್ಲಿ ಶನಿವಾರ‌ ತಡರಾತ್ರಿ ನಡೆದಿದೆ.
ಕಲ್ಲುಮಠದ ಪಂಪಾಪತಿ (55), ನಿರ್ಮಲಾ (50) ಪತ್ನಿ ಮೃತರು. ಪತಿ ಅನಾರೋಗ್ಯದಿಂದ ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪಂಪಾಪತಿ ಅವರು ಶನಿವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪತಿಯ ಸುದ್ದಿ ಕೇಳಿ ಪತ್ನಿಯು ಕೊನೆಯುಸಿರೆಳೆದಿದ್ದಾರೆ. ಮೃತ ದಂಪತಿ ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧ-ಬಳಗ ಅಗಲಿದ್ದಾರೆ. ನಗರದ ವೀರಶೈವ ರುದ್ರಭೂಮಿಯಲ್ಲಿ ಭಾನುವಾರ ದಂಪತಿಯ ಅಂತ್ಯಕ್ರಿಯೆ ಜರುಗಲಿದೆ.

Previous articleವಿದ್ಯುತ್ ಲೈನ್ ಯೋಜನೆಗೆ ವಿರೋಧ : ಸಂತ್ರಸ್ತರಿಂದ ಕಾಮಗಾರಿ ಸ್ಥಗಿತ
Next articleಫಲಕಾರಿಯಾಗದ ಚಿಕಿತ್ಸೆ: ಎಎಸ್ ಐ ಸಾವು