ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮುಡಾ ಪ್ರಕರಣದ ತೀರ್ಪಿನ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯವದವರೊಂದಿಗೆ ಮೊದಲ ಬಾರಿಗೆ ಮಾತನಾಡಿರುವ ಅವರು, ನನ್ನೊಂದಿಗೆ ಎಲ್ಲ ಶಾಸಕರು, ಸಂಸದರು, ಹೈಕಮಾಂಡ್ ಮತ್ತು ರಾಜ್ಯದ ಜನರು ಇದ್ದಾರೆ. ಸದ್ಯ ಕೋರ್ಟ್ ಪ್ರಾಥಮಿಕ ತನಿಖೆಗೆ ಆದೇಶಿದೆ. ನನ್ನ ಪ್ರಕಾರ ಈಗಲೂ ನಾನೇನೂ ತಪ್ಪು ಮಾಡಿಲ್ಲ. ತನಿಖೆ ನಡೆಯಲಿ. ರಾಜೀನಾಮೆ ನೀಡುವ ಅವಶ್ಯವಿಲ್ಲ ಎಂದರು.
ತೀರ್ಪಿನ ಆದೇಶದ ಪ್ರತಿ ಓದಿದ ಬಳಿಕ ಕಾನೂನು ತಜ್ಞರ ಜತೆ ಸಮಾಲೋಚಿಸಿ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.