ನವ ಚಂಡಿಕಾಯಾಗದಲ್ಲಿ ಯಡಿಯೂರಪ್ಪ ಕುಟುಂಬ ಭಾಗಿ

0
24

ದೇವಸ್ಥಾನದಲ್ಲಿ ನವಚಂಡಿಕಾ ಯಾಗ ಕೈಗೊಂಡಿದ್ದಾರೆ. ಯಾಗದಲ್ಲಿ ಕುಟುಂಬದ ಇತರೆ ಸದಸ್ಯರು ಭಾಗಿಯಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದಂಪತಿ ಕೂಡಾ ಪಾಲ್ಗೊಂಡಿದ್ದರು.

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಅನ್ನಪೂರ್ಣೆಯ ಮೊರೆ ಹೋಗಿದ್ದಾರೆ. ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕುಟುಂಬ ಸಮೇತರಾಗಿ ನವ ಚಂಡಿಕಾಯಾಗ ಕೈಗೊಂಡಿದ್ದಾರೆ.

ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ಬಿ ಎಸ್ ವೈ ಆದಿಶಕ್ತಿ ಹೊರನಾಡ ಅನ್ನಪೂರ್ಣೇಶ್ವರಿ ಮೊರೆ ಹೋಗಿದ್ದಾರೆ. ಮಾಜಿ ಸಿ.ಎಂ ಬಿಎಸ್‌ ಯಡಿಯೂರಪ್ಪ ಕುಟುಂಬದೊಂದಿಗೆ ನವಚಂಡಿಕಾ ಯಾಗ ನಡೆಸಿದ್ದಾರೆ.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವಚಂಡಿಕಾ ಯಾಗ ಕೈಗೊಂಡಿದ್ದಾರೆ. ಯಾಗದಲ್ಲಿ ಕುಟುಂಬದ ಇತರೆ ಸದಸ್ಯರು ಭಾಗಿಯಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದಂಪತಿ ಕೂಡಾ ಪಾಲ್ಗೊಂಡಿದ್ದರು. 9 ಜನ ಋತ್ವಿಜರ ನೇತೃತ್ವದಲ್ಲಿ ನಡೆಯುತ್ತಿರುವ ಯಾಗಕ್ಕೆ ಕಳೆದ ರಾತ್ರಿಯೇ ಪಾರಾಯಣ ನಡೆಸಿ ಇಂದು ನವ ಚಂಡಿಕಾಯಾಗ ನಡೆಸಲಾಗುತ್ತಿದೆ.

Previous articleನೀರಿನ ಸಮಸ್ಯೆ ಪರಿಹರಿಸಲು ಜೈಲಿನಿಂದ ಸಿಎಂ ಕೇಜ್ರಿವಾಲ್ ಅವರ ಆದೇಶ
Next articleಲಡಾಖ್‌ನಲ್ಲಿ ರಾಜನಾಥ್ ಸಿಂಗ್ ಸೇನಾ ಸಿಬ್ಬಂದಿಯೊಂದಿಗೆ ಹೋಳಿ ಆಚರಣೆ