ನಟ ದರ್ಶನ್‌ ಗನ್‌ ಲೈಸೆನ್ಸ್‌ ತಾತ್ಕಾಲಿಕ ಅಮಾನತು

0
18

ಬೆಂಗಳೂರು: ನಟ ದರ್ಶನ್ ಅವರ ಬಳಿಯಿರುವ ಗನ್ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತ್ತು ಮಾಡಲಾಗಿದೆ ಎಂದು ಪೊಲೀಸ್ ಕಮಿಷನ‌ರ್ ದಯಾನಂದ್‌ ತಿಳಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರ ರದ್ದು ಕುರಿತಂತೆ ನೋಟಿಸ್ ನೀಡಿದ್ದರು. ಆದರೆ ನಟ ದರ್ಶನ್, ನಾನೊಬ್ಬ ಸೆಲೆಬ್ರಿಟಿ ಆಗಿದ್ದರಿಂದ ಭದ್ರತೆಯ ದೃಷ್ಟಿಯಿಂದ ಗನ್ ಅವಶ್ಯಕತೆ ಇದೆ. ನನ್ನ ಆತ್ಮರಕ್ಷಣೆಗೆ ಗನ್ ಬೇಕು ಎಂದು ಪೊಲೀಸರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ದರ್ಶನ್ ಅವರ ಗನ್ ಲೈಸೆನ್ಸ್‌ನ್ನು ತಾತ್ಕಾಲಿಕ ಅಮಾನತ್ತಿನಲ್ಲಿಡಲು ನಿರ್ಧಾರ ಮಾಡಿದ್ದಾರೆ. ದರ್ಶನ್ ಅವರು ತನ್ನ ಬಳಿಯಿರುವ ಎರಡು ಗನ್ ಆರ್ ಆರ್ ನಗರ ಪೊಲೀಸರಿಗೆ ಸರೆಂಡರ್ ಮಾಡಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.

Previous articleಕುಟುಂಬ ಸಮೇತ‌ ರಾಯಲ್ ಸಿನಿಮಾ ವೀಕ್ಷಿಸಿದ ದರ್ಶನ್
Next articleಮುನಿರತ್ನ ಮೇಲೆ ಮತ್ತೊಂದು FIR