ನಕಲಿ ಸಿಐಡಿ ಕ್ರೈಂ‌ ಬ್ರಾಂಚ್ ಹೆಸರಿನಲ್ಲಿ ಮಹಿಳೆಗೆ ವಂಚನೆ

0
6

ಹುಬ್ಬಳ್ಳಿ: ಸಿಐಡಿ ಕ್ರೈಂ ಬ್ರಾಂಚ್ ಪೊಲೀಸರು ಎಂದು ಹೇಳಿಕೊಂಡು ಜನರಿಗೆ ಹೆದರಿಸಿ ಹಣ ಪಡೆಯುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಹಳೇ ಹುಬ್ಬಳ್ಳಿ ಪೊಲೀಸರು ಅವರಿಂದ ಒಂದು ಬುಲೆಟ್ ದ್ವಿಚಕ್ರ ವಾಹನ ಹಾಗೂ ೨ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಗೆ ಸಿಐಡಿ ಕ್ರೈಂ ಬ್ರಾಂಚ್ ಅಧಿಕಾರಿಗಳು ಎಂದು ಬೆದರಿಸಿ ಅವಳಿಂದ ಹಣ ಪಡೆದಿದ್ದರು. ಈ‌ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್.ಎಸ್. ಯಳ್ಳೂರ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳು ಬಂಧಿಸಿ, ನ್ಯಾಯಾಲಯ ಬಂಧನಕ್ಕೆ ನೀಡಲಾಗಿದೆ.

Previous articleಅನುದಾನ ವಿಷಯದಲ್ಲಿ ತಾರತಮ್ಯ ತೋರಿದ ಉದಾಹರಣೆಗಳಿಲ್ಲ
Next articleಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್‌ ಆಸ್ಪತ್ರೆಗೆ ದಾಖಲು