Home ಅಪರಾಧ ನಕಲಿ ಸಿಐಡಿ ಕ್ರೈಂ‌ ಬ್ರಾಂಚ್ ಹೆಸರಿನಲ್ಲಿ ಮಹಿಳೆಗೆ ವಂಚನೆ

ನಕಲಿ ಸಿಐಡಿ ಕ್ರೈಂ‌ ಬ್ರಾಂಚ್ ಹೆಸರಿನಲ್ಲಿ ಮಹಿಳೆಗೆ ವಂಚನೆ

0

ಹುಬ್ಬಳ್ಳಿ: ಸಿಐಡಿ ಕ್ರೈಂ ಬ್ರಾಂಚ್ ಪೊಲೀಸರು ಎಂದು ಹೇಳಿಕೊಂಡು ಜನರಿಗೆ ಹೆದರಿಸಿ ಹಣ ಪಡೆಯುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಹಳೇ ಹುಬ್ಬಳ್ಳಿ ಪೊಲೀಸರು ಅವರಿಂದ ಒಂದು ಬುಲೆಟ್ ದ್ವಿಚಕ್ರ ವಾಹನ ಹಾಗೂ ೨ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಗೆ ಸಿಐಡಿ ಕ್ರೈಂ ಬ್ರಾಂಚ್ ಅಧಿಕಾರಿಗಳು ಎಂದು ಬೆದರಿಸಿ ಅವಳಿಂದ ಹಣ ಪಡೆದಿದ್ದರು. ಈ‌ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್.ಎಸ್. ಯಳ್ಳೂರ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳು ಬಂಧಿಸಿ, ನ್ಯಾಯಾಲಯ ಬಂಧನಕ್ಕೆ ನೀಡಲಾಗಿದೆ.

Exit mobile version