ಧಗಧಗನೇ ಉರಿದ ನಿಂತ ಲಾರಿ

0
19

ಇಳಕಲ್ : ಸೊಲ್ಲಾಪುರ ಮಂಗಳೂರ ರಾಷ್ಟ್ರೀಯ ಹೆದ್ದಾರಿ ೫೦ ರ ಇಲ್ಲಿನ ಹಾದಿಬಸವನಗರ ಬಳಿ ನಿಲ್ಲಿಸಿದ್ದ ಲಾರಿಯೊಂದು ರಾತ್ರಿ ಮೂರು ಗಂಟೆಯ ಸುಮಾರಿಗೆ ಧಗಧಗನೇ ಉರಿದು ಸುಟ್ಟು ಹೋಗಿದೆ.
ಮೇವಿನ ಹೊಟ್ಟು ತುಂಬಿಕೊಂಡು ನಿಪ್ಪಾಣಿಯತ್ತ ಹೊರಟಿದ್ದ ಈ ಲಾರಿಯ ಇಂಜಿನ್ ಗರಮ್ ಆಗಿದ್ದರಿಂದ ಅದನ್ನು ನಿಲ್ಲಿಸಿ ಚಾಲಕ ಮತ್ತು ಕ್ಲೀನರ್ ಲಾರಿಯಲ್ಲಿ ನಿದ್ರೆಗೆ ಜಾರಿದ್ದಾರೆ ಆ ಸಮಯದಲ್ಲಿ ಲಾರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಸುಡಲು ತೊಡಗಿದಾಗ ಅಲ್ಲಿಯೇ ಎಚ್ಚರವಿದ್ದ ಜನ ಪೋಲಿಸ್ ಠಾಣೆಗೆ ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ.
ರಾತ್ರಿ ಕರ್ತವ್ಯದಲ್ಲಿ ಇದ್ದ ಪಿಎಸ್ ಐ ಷಹಜಹಾನ ನಾಯಕ ಕೂಡಲೇ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಲಾರಿಯಲ್ಲಿದ್ದ ಜನರನ್ನು ಸುರಕ್ಷಿತವಾಗಿ ಹೊರಗೆ ತಂದು ಬೆಂಕಿಯನ್ನು ನಂದಿಸಲು ಕ್ರಮ ಕೈಗೊಂಡಿದ್ದಾರೆ.
ಇಳಕಲ್ ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ತನಿಖೆ ನಡೆಯುತ್ತಿದೆ.

Previous articleಕಲುಷಿತ ರಾಸಾಯನಿಕ ಬಣ್ಣ ವಿದ್ಯಾರ್ಥಿನಿಯರು ಅಸ್ವಸ್ಥ
Next articleದರೋಡೆ: ಮತ್ತೀಬ್ಬರಿಗೆ ಪೊಲೀಸರ ಫೈರಿಂಗ್