Home ಅಪರಾಧ ಧಗಧಗನೇ ಉರಿದ ನಿಂತ ಲಾರಿ

ಧಗಧಗನೇ ಉರಿದ ನಿಂತ ಲಾರಿ

0

ಇಳಕಲ್ : ಸೊಲ್ಲಾಪುರ ಮಂಗಳೂರ ರಾಷ್ಟ್ರೀಯ ಹೆದ್ದಾರಿ ೫೦ ರ ಇಲ್ಲಿನ ಹಾದಿಬಸವನಗರ ಬಳಿ ನಿಲ್ಲಿಸಿದ್ದ ಲಾರಿಯೊಂದು ರಾತ್ರಿ ಮೂರು ಗಂಟೆಯ ಸುಮಾರಿಗೆ ಧಗಧಗನೇ ಉರಿದು ಸುಟ್ಟು ಹೋಗಿದೆ.
ಮೇವಿನ ಹೊಟ್ಟು ತುಂಬಿಕೊಂಡು ನಿಪ್ಪಾಣಿಯತ್ತ ಹೊರಟಿದ್ದ ಈ ಲಾರಿಯ ಇಂಜಿನ್ ಗರಮ್ ಆಗಿದ್ದರಿಂದ ಅದನ್ನು ನಿಲ್ಲಿಸಿ ಚಾಲಕ ಮತ್ತು ಕ್ಲೀನರ್ ಲಾರಿಯಲ್ಲಿ ನಿದ್ರೆಗೆ ಜಾರಿದ್ದಾರೆ ಆ ಸಮಯದಲ್ಲಿ ಲಾರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಸುಡಲು ತೊಡಗಿದಾಗ ಅಲ್ಲಿಯೇ ಎಚ್ಚರವಿದ್ದ ಜನ ಪೋಲಿಸ್ ಠಾಣೆಗೆ ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ.
ರಾತ್ರಿ ಕರ್ತವ್ಯದಲ್ಲಿ ಇದ್ದ ಪಿಎಸ್ ಐ ಷಹಜಹಾನ ನಾಯಕ ಕೂಡಲೇ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಲಾರಿಯಲ್ಲಿದ್ದ ಜನರನ್ನು ಸುರಕ್ಷಿತವಾಗಿ ಹೊರಗೆ ತಂದು ಬೆಂಕಿಯನ್ನು ನಂದಿಸಲು ಕ್ರಮ ಕೈಗೊಂಡಿದ್ದಾರೆ.
ಇಳಕಲ್ ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ತನಿಖೆ ನಡೆಯುತ್ತಿದೆ.

Exit mobile version