ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಗೊಳ್ಳುತ್ತಿದ್ದ ‘ಅಶ್ವತ್ಥಾಮ’ ಆನೆಯು ವಿದ್ಯುತ್ ತಗುಲಿ ಇಂದು ಮೃತಪಟ್ಟಿದೆ.
ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 38 ವರ್ಷದ ‘ಅಶ್ವತ್ಥಾಮ’ ಆನೆಯು ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ. ಅಶ್ವತ್ಥಾಮನನ್ನು 2017ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಳಿ ಸೆರೆ ಹಿಡಿಯಲಾಗಿತ್ತು. ಇದಕ್ಕೆ ನಡಿಗೆ ತಾಲೀಮುಗಳನ್ನು ಕಲಿಸಿ 2021 ರಲ್ಲಿ ದಸರಾ ಮಹೋತ್ಸವಕ್ಕೆ ಕರೆದು ತರಲಾಗಿತ್ತು. ಆದರೆ ಜಂಬೂಸವಾರಿ ಮೆರವಣಿಗೆಗೆ ಭಾಗವಹಿಸಿರಲಿಲ್ಲ.