ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿಗೆ ಪತ್ನಿ ವಿಜಯಲಕ್ಷ್ಮೀ ಭೇಟಿ ನೀಡಿ ದರ್ಶನ್ ಜತೆ ಮಾತುಕತೆ ನಡೆಸಿದರು.
ಮಳೆ ಹಿನ್ನೆಲೆಯಲ್ಲಿ ಕೊಡೆ ಹಿಡಿದು ಆಗಮಿಸಿದ ವಿಜಯಲಕ್ಷ್ಮೀ ಜತೆ ದರ್ಶನ್ ಸಹೋದರ ದಿನಕರ್ ತೂಗುದೀಪ, ನಟ ಧನ್ವೀರ್, ಸುಶಂತ್ ನಾಯ್ಡು ಆಗಮಿಸಿದರು.
ಎರಡು ಬ್ಯಾಗ್‌ಗಳನ್ನ ತೆಗೆದುಕೊಂಡು ಬಂದ ದಿನಕರ್ ಬಟ್ಟೆಗಳು, ಡ್ರೈ ಫ್ರೂಟ್ಸ್, ಬೇಕರಿ ತಿನಿಸುಗಳನ್ನು ಜೈಲಿಗೆ ತಂದರು.