ಬಾಗಲಕೋಟೆ(ರಬಕವಿ-ಬನಹಟ್ಟಿ): ಮನೆಯಲ್ಲಿನ ಕಲಹ ಬೈಕಿಗೆ ಬೆಂಕಿ ಹಚ್ಚುವಲ್ಲಿಗೆ ಮುಟ್ಟಿದ ಪ್ರಸಂಗ ರವಿವಾರ ಸಂಜೆ ನಡೆದಿದೆ.
ಬನಹಟ್ಟಿಯ ಸೋಮವಾರ ಪೇಟೆಯ ಹಳೆ ಅಂಚೆ ಕಚೇರಿ ಹತ್ತಿರ ಬಾಡಿಗೆ ಮನೆಯಲ್ಲಿ ಪತ್ನಿ ವಾಸವಾಗಿದ್ದಳು. ಪತ್ನಿಯ ಮನೆಗೆ ಬಂದ ಪತಿ ಜಗಳವಾಡಿದ್ದಾನೆ. ನಂತರ ರಸ್ತೆ ಮೇಲಿದ್ದ ಪತ್ನಿಯ ಸ್ಕೂಟಿ ಬೈಕ್‌ಗೆ ಬೆಂಕಿ ಹಚ್ಚಿದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಸ್ಥಳೀಯರು ನಿಂತು ನೋಡಿದ್ದಾರೆ. ಸಂಜೆ ಹೊತ್ತು ಜನಜಂಗುಳಿ ಮಧ್ಯೆಯೇ ಇಂತಹ ಕೃತ್ಯ ನಡೆದಿದೆ. ಪ್ರಕರಣದ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ. ಪೆಟ್ರೋಲ್ ಬೈಕ್ ಕಾರಣ ಸ್ಫೋಟಗೊಳ್ಳಲಿದೆ ಎಂಬ ಭಯದಿಂದ ಜನರು ದೂರ ನಿಂತಿದ್ದರು. ಸಕಾಲಕ್ಕೆ ಅಗ್ನಿಶಾಮಕ ಹಾಗು ಪೊಲೀಸ್ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.