ತಾಳಿ ತೆಗೆದರೆ ತಪ್ಪಿಲ್ಲ…? ಜನಿವಾರ ತೆಗೆದರೆ ತಪ್ಪು…!

0
27

ಚಿಕ್ಕಮಗಳೂರು: ಜನಿವಾರ ತೆಗೆದಿದ್ದೇ ದೊಡ್ಡ ವಿವಾದ, ತಾಳಿ ತೆಗೆದಾಗ ಸುದ್ದಿ ಆಗಲೇ ಇಲ್ಲ, ತಾಳಿ ತೆಗೆದರೆ ತಪ್ಪಿಲ್ಲ, ಜನಿವಾರ ತೆಗೆದರೆ ತಪ್ಪು, ಹೆಣ್ಣು ಮಗಳ ತಾಳಿ ತೆಗೆಸಿದಾಗ ಯಾವ ಮಾಧ್ಯಮವೂ ಮಾತನಾಡಲೇ ಇಲ್ಲ ಎಂದು ಸಹಕಾರ ಸಚಿವ ರಾಜಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ತಾಳಿಗೆ ಎಷ್ಟು ಮಹತ್ವವಿದೆ, ಜನಿವಾರಕ್ಕೂ ಅಷ್ಟೇ ಮಹತ್ವವಿದೆ. ಮಾಧ್ಯಮದಲ್ಲಿ ತಾಳಿ ತೆಗೆಸಿದ್ದಕ್ಕೆ ಲೆಕ್ಕವೇ ಇಲ್ಲ, ಯಾಕಂದ್ರೆ ಆಕೆ ಶೂದ್ರ ಹೆಣ್ಣು ಮಗಳು, ಅವರದ್ದು ತಾಳಿ ತೆಗೆಸಬಹುದು, ಬ್ರಾಹ್ಮಣರ ಜನಿವಾರ ಕತ್ತರಿಸಿದ್ದೇ ದೊಡ್ಡ ವಿಚಾರವಾಗಿದೆ ಎಂದರು.
ಶೋಷಿತ ವರ್ಗದ ಶೂದ್ರ ಹೆಣ್ಣು ಮಗಳಲ್ವಾ ತಾಳಿ ತೆಗೆದದ್ದು ಅದಕ್ಕೆ ದೊಡ್ಡ ವಿಚಾರವಲ್ಲ ಎಂದು ಕೇಳಿ, ಶೋಷಿತ ವರ್ಗದವರ ಮೇಲೆ ಯಾವುದೇ ದಬ್ಬಾಳಿಕೆ ಅದ್ರೂ ಯಾವ ಮಾಧ್ಯಮ, ರಾಜಕೀಯ ವ್ಯಕ್ತಿಯೂ ಪ್ರಸ್ತಾಪ ಮಾಡಲ್ಲ ಎಂದು ಹೇಳಿದರು.
ಕೌಟುಂಬಿಕ ಕಲಹಕ್ಕೆ ಆದ ಘಟನೆಗೆ ಸರ್ಕಾರ ಹೊಣೆಯಾಗಲ್ಲ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಹತ್ಯೆಯ ಕುರಿತು ಮಾತನಾಡಿ, ಹತ್ಯೆಯ ತನಿಖೆಯನ್ನು ಎನ್‌ಐಎ, ಸಿಬಿಐ, ಎಫ್‌ಬಿಐ, ಬೇಕಾದ್ರು ಮಾಡಲಿ ನಮಗೆ ಅಂಜಿಕೆ ಇಲ್ಲ ಎಂದರು.
ಇದು ಅವರ ಕುಟುಂಬದಲ್ಲಿ ಆದ ಘಟನಾವಳಿಗಳಿವು, ಅವರ ಕುಟುಂಬದಲ್ಲಿ ಏನೇನು ದ್ವೇಷ ಇತ್ತು ಗೊತ್ತಿಲ್ಲ. ಆಸ್ತಿಗಳನ್ನು ಅವರ ತಂಗಿಯರ ಹೆಸರಿಗೆ ವರ್ಗಾವಣೆ ಮಾಡುತ್ತಿದ್ದರು ಈ ಬಗ್ಗೆ ಅವರ ಮಡದಿಗೆ ಅಸಮಾಧಾನ ಇತ್ತು ಎಂಬುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಎಂದು ಹೇಳಿದರು.
ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಯುತ್ತದೆ ತನಿಖೆ ನಡೆದ ಮೇಲೆ ನಿಜಾಂಶ ಹೊರಬೀಳಲಿದೆ ಎಂದರು. ನೀವು ಹಿಜಬ್ ಬಗ್ಗೆ ಮಾತನಾಡುತ್ತೀರಾ ಆದರೆ ಜನಿವಾರ ಪರ ಮಾತಾಡಲ್ಲ ಎಂದಾಗ ಇಜಬ್ಬೋ… ಪಜಬ್ಬೋ…. ನೀನು ನಡೀಯಪ್ಪಾ ಸುಮ್ಮೆ ಯಾಕೆ…. ಅಂತ ತೆರಳಿದರು.

Previous articleರಾತ್ರಿ ಸುರಿದ ಮಳೆಗೆ ಬೆಳೆ ಹಾನಿ: ಹಾನಿ ಪ್ರದೇಶಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ
Next articleರಾಹುಲ್ ಮಕ್ಕಳ ನಡವಳಿಕೆಯನ್ನು ಪ್ರದರ್ಶಿಸುತ್ತಿದ್ದಾರೆ