ಟೀಂ ಇಂಡಿಯಾ ಜೆರ್ಸಿ ತೊಟ್ಟ ವಿನೋದ್ ಕಾಂಬ್ಳಿ

0
36

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಟೀಂ ಇಂಡಿಯಾದ ಜೆರ್ಸಿ ತೊಟ್ಟು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ತೀವ್ರ ಅನಾರೋಗ್ಯದಿಂದಾಗಿ ಮುಂಬೈನ ಥಾಣೆ ಆಸ್ಪತ್ರೆಯಲ್ಲಿ ದಾಖಲಾಗಿ 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವ ಕಾಂಬ್ಳಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಫಲವಾಗಿ ಅವರ ಆರೋಗ್ಯ ಸ್ಥಿರವಾಗಿದ್ದು, ಮನೆಗೆ ಮರಳಿದ್ದಾರೆ. ಆಸ್ಪತ್ರೆಯಿಂದ ಹೊರಬರುವಾಗ ಅವರು ಮಾಧಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನೂ ನೀಡಿದ್ದು ‘ಮದ್ಯಪಾನ, ಡ್ರಗ್ಸ್‌ ಸೇವನೆಯಿಂದ ದೂರವಿರಿ. ಅದು ನಿಮ್ಮ ಜೀವನವನ್ನೇ ನಾಶ ಮಾಡಲಿದೆ’ ಎಂದಿದ್ದಾರೆ.

Previous articleಪಂಚ ಗ್ಯಾರಂಟಿಗಿಂತ, ಬದುಕುವ ಗ್ಯಾರಂಟಿ ‌ಬೇಕು
Next articleನಾಲ್ವರು ಕ್ರೀಡಾ ಸಾಧಕರಿಗೆ ಮೇಜರ್ ಧ್ಯಾನ್ ​ಚಂದ್‌ ಖೇಲ್ ರತ್ನ ಪ್ರಶಸ್ತಿ