ಕೊಡಗು ಅಪಘಾತ ಪ್ರಕರಣ: ಟಾರ್ಗೆಟ್ ಮಾಡುತ್ತಿರುವುದು ಹೇಡಿಗಳ ಲಕ್ಷಣ

0
13

ಬೆಂಗಳೂರು: ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವುದು ಹೇಡಿಗಳ ಲಕ್ಷಣ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಪ್ರಚಾರ ನಿರತ ಬಿಜೆಪಿ ಕಾರ್ಯಕರ್ತರ ಮೇಲೆ ದುಷ್ಟರ ಗುಂಪೊಂದು ಕಾರು ಚಲಾಯಿಸಿದ್ದರಿಂದ ನಿನ್ನೆ ಕೊಡಗು ಜಿಲ್ಲೆಯ ಸಿದ್ದಾಪುರದ ತ್ಯಾಗತ್ತೂರಿನಲ್ಲಿ ನಮ್ಮ ಕಾರ್ಯಕರ್ತರಾದ ಶಿವನೇ ಗೌಡ ರಾಮಪ್ಪ ಮೃತಪಟ್ಟಿದ್ದು ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಕಾರ್ಯಕರ್ತರ ಒಗ್ಗಟ್ಟು, ಪಕ್ಷ ನಿಷ್ಠೆ, ಬದ್ಧತೆ ತಾಳಲಾಗದ ಕೆಲ ಕುತಂತ್ರಿಗಳು, ಪಟ್ಟಭದ್ರಹಿತಾಸಕ್ತಿಗಳು ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವುದು ಹೇಡಿಗಳ ಲಕ್ಷಣ. ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಹಾಗೂ ತನಿಖೆಯನ್ನು ಚುರುಕುಗೊಳಿಸಬೇಕು ಎಂದಿದ್ದಾರೆ.

Previous articleಕಲಬುರಗಿಯ ಪ್ರಭಾವಿ ನಾಯಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
Next articleನೌಕಾಪಡೆಯ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ