ಗಣೇಶ ವಿಸರ್ಜನೆ ಮೆರವಣಿಗೆ ಭದ್ರತೆಗೆ 3500ಕ್ಕೂ ಹೆಚ್ಚು ಸಿಬ್ಬಂದಿ

0
21

ಹುಬ್ಬಳ್ಳಿ: 11ನೇ ದಿನದ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಅವಳಿನಗರದಾದ್ಯಂತ 3,500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
50ಕ್ಕೂ ಹೆಚ್ಚು ಅತಿ ಸೂಕ್ಷ್ಮ ಪ್ರದೇಶವನ್ನು ಗುರುತಿಸಿದ್ದು, ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾ ಇಡಲಾಗುತ್ತಿದೆ. ದುರ್ಗದಬೈಲ್‌, ಕೊಪ್ಪಿಕರ್‌ ರಸ್ತೆ, ಸ್ಟೇಷನ್‌ ರಸ್ತೆ, ಲ್ಯಾಮಿಂಗ್ಟನ್‌ ರಸ್ತೆ, ದಾಜೀಬಾನ್‌ ಪೇಟೆ, ಬಂಕಾಪುರ ಓಣಿ, ಗೋಕುಲ ರಸ್ತೆ, ಹಳೇಬಸ್‌ ನಿಲ್ದಾಣ, ಚನ್ನಮ್ಮ ವೃತ್ತ ಸೇರಿದಂತೆ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ 200ಕ್ಕೂ ಹೆಚ್ಚು ಸಿಸಿಟವಿ ಕ್ಯಾಮೆರಾ ಅಳವಡಿಸಲಾಗಿದೆ.
12 ಎಸಿಪಿ, 55 ಇನ್ಸ್‌ಸ್ಪೆಕ್ಟರ್‌, 109 ಪಿಎಸ್‌ಐ, 257 ಎಎಸ್‌ಐ, 671 ಹೆಡ್‌ ಕಾನ್‌ಸ್ಟೆಬಲ್‌, 1,375 ಕಾನ್‌ಸ್ಟೆಬಲ್‌, 681 ಗೃಹರಕ್ಷ ಸಿಬ್ಬಂದಿ ಸೇರಿದಂತೆ ಕೆಎಸ್‌ಆರ್‌ಪಿ, ಸಿಆರ್‌ಪಿ, ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ಸೇರಿ 350ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಿಕೊಳ್ಳಲಾಗಿದೆ.

Previous articleಕತ್ತಿಯಿಂದಲೇ ಉತ್ತರ ಕೊಡಲು ನಾವು ಸಿದ್ಧ
Next articleಪುರುಷರ ಏಷ್ಯನ್ ಹಾಕಿ ಚಾಂಪಿಯನ್‌ಶಿಪ್ ಟೂರ್ನಿ: ಭಾರತ ಫೈನಲ್‌ಗೆ