ಕೋಡಿ ಬಿದ್ದ ಹಿರೇಕೊಳಲೆ ಕೆರೆ

0
14

ಚಿಕ್ಕಮಗಳೂರು : ನಗರಕ್ಕೆ ನೀರೊದಗಿಸುವ ಹತ್ತಿರದ ಪ್ರವಾಸಿ ಸ್ಥಳ ಹಿರೇಕೊಳಲೆ ಕೆರೆ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ.
ಕಳೆದ 15 ದಿನಗಳ ನಿರಂತರ ಮಳೆಗೆ ತುಂಬಿ ಹರಿಯುತ್ತಿದ್ದು ಕೆರೆಯ ವಿಹಂಗಮ ನೋಟ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು ಕೈ ಬೀಸಿ ಕರೆಯುತ್ತಿದೆ.

ಚಿಕ್ಕಮಗಳೂರಿನಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು ಭಾರೀ ವರ್ಷಧಾರೆಯಿಂದಾಗಿ ಐತಿಹಾಸಿಕ ಹಿರೇಕೊಳಲೆಕೆರೆ ಸಂಪೂರ್ಣ ತುಂಬಿ ಕೊಡಿ ಬಿದ್ದಿದೆ. ಚಿಕ್ಕಮಗಳೂರು ನಗರಕ್ಕೆ ನೀರು ಒದಗಿಸುವ ದೊಡ್ಡ ಕೆರೆ ಇದಾಗಿದ್ದು ನಗರವಾಸಿಗಳ ನೀರ ಕೊರತೆ ನೀಗಿಸಿದೆ. ಕೆರೆ ಭರ್ತಿಯಿಂದಾಗಿ ಚಿಕ್ಕಮಗಳೂರು ನಗರದ ನಿವಾಸಿಗಳಲ್ಲಿ ಸಂತಸ ಮೂಡಿದಂತಾಗಿದೆ. ವರ್ಷವಿಡಿ ಹಲವು ಬಡಾವಣೆಗಳಿಗೆ ಕುಡಿಯುವ ನೀರಿಗೆ ಈ ಕೆರೆಯೇ ಆಸರೆಯಾಗಿದೆ.

ತುಂಬಿದ ಕೆರೆಯ ಸೌಂದರ್ಯ ನೋಡಲು ಸ್ಥಳೀಯರು ಮುಗಿಬಿದ್ದು ಆಗಮಿಸುತ್ತಿದ್ದಾರೆ. ಗಿರಿ ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಹಿರೇಕೊಳಲೆ ಕೆರೆ ಭರ್ತಿಯಾಗಿದೆ

Previous articleವಿಶಿಷ್ಟ ಅಭಿಯಾನ: ಪ್ಲಾಸ್ಟಿಕ್ ತ್ಯಾಜ್ಯದ ಬದಲಾಗಿ ಸಕ್ಕರೆ…
Next articleUPSC ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ