ಕೊಪ್ಪಳದಲ್ಲಿ ಮತದಾನ ಬಹಿಷ್ಕಾರ

0
13

ಕುಷ್ಟಗಿ: ಹೆರಿಗೆ ಸಮಯದಲ್ಲಿ ತಾಯಿ ಹಾಗೂ ಮಗು ಮೃತಪಟ್ಟ ಹಿನ್ನಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕರಿಸಿದ್ದಾರೆ.
ತಾವರಗೇರಾ ಪಟ್ಟಣದ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ. ವಾರದ ಹಿಂದೆ ಇದೇ ಬಡಾವಣೆಯ ನಿವಾಸಿ ಲಕ್ಷ್ಮಿ ಎಂಬುವರು ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದಾರೆ. ಮಗು ಕೂಡ ಮೃತಪಟ್ಟಿದೆ. ವೈದ್ಯರ ನಿರ್ಲಕ್ಷ್ಯ ದಿಂದ ತಾಯಿ-ಮಗು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮತ್ತು ಬಡಾವಣೆಯ ಜನ ಆರೋಪಿಸಿದ್ದರು. ಈ ಹಿನ್ನೆಲಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕರಿಸಿದ್ದಾರೆ.

Previous articleಖರ್ಗೆ ದಂಪತಿಯಿಂದ ಮತದಾನ
Next articleನಾಲ್ಕು ಮತಗಟ್ಟೆ ಚುನಾವಣಾ ಸಿಬ್ಬಂದಿಗೆ ಚಪಾತಿ ಊಟ