ಕಾರು ಅಪಘಾತ: ರಜತ್ ಉಳ್ಳಾಗಡ್ಡಿಮಠ ಪಾರು

0
12

ಹುಬ್ಬಳ್ಳಿ: ಕಾಂಗ್ರೆಸ್ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಅವರ ಕಾರು ತುಮಕೂರು ಹತ್ತಿರ ರಸ್ತೆ ಅಪಘಾತವಾಗಿದ್ದು, ಅದೃಷ್ಟವಶಾತ್ ರಜತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ನಡೆದಿದೆ.
ರಜತ್ ಉಳ್ಳಾಗಡ್ಡಿಮಠ ಪ್ರಯಾಣಿಸುತ್ತಿರುವ ಕಾರಿಗೆ ಹಿಂದಿಯಿಂದ ಬಂದ ಟ್ರಕ್ ಡಿಕ್ಕಿಯಾಗಿದೆ ಎನ್ನಲಾಗಿದೆ. ಕಾರಿನಲ್ಲಿ ರಜತ್, ವೀರೇಶ ಉಂಡಿ, ಸಾಧಿಕ್ ಯಕ್ಕುಂಡಿ, ಪ್ರಜ್ವಲ್ ಪ್ರಯಾಣಿಸುತ್ತಿದ್ದು, ಎಲ್ಲರು ಸುರಕ್ಷಿತವಾಗಿದ್ದಾರೆ. ಬೇರೆ ಕಾರಿನಲ್ಲಿ ಬೆಂಗಳೂರು ಪ್ರಯಾಣ ಮುಂದುವರೆಸಿದ್ದಾರೆ. ತಾವು ಸುರಕ್ಷಿತವಾಗಿರುವುದಾಗಿ ರಜತ್ ಉಳ್ಳಾಗಡ್ಡಿಮಠ ಅವರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

Previous articleಕೇವಲ 5 ದಿನಗಳಲ್ಲೇ ಅಲ್ಲಿ ಅಭಿವೃದ್ಧಿಯ ಯುಗ ಆರಂಭಗೊಂಡಿದೆ!
Next articleಪ್ರಕರಣ ದಾಖಲಿಸುತ್ತೇನೆ