ಕಾಫಿ ಕಣದಲ್ಲಿ ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಕಾಡಾನೆ

0
11

ಚಿಕ್ಕಮಗಳೂರು: ಕಾಫಿ ರಕ್ಷಣೆಗಾಗಿ ಕಾಫಿ ಕಣದಲ್ಲಿ ಮಲಗಿದ್ದ ವ್ಯಕಿಯನ್ನು ಕಾಡಾನೆ ಸೊಂಡಲಿನಿಂದ ಎತ್ತಿ ಬಿಸಾಕಿರುವ ಘಟನೆ ಆಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ನಡೆದಿದೆ.
ಹೆಡದಾಳು ಹುಕ್ಕುಂದ ಗ್ರಾಮದ ರೈತ ನಾರಾಯಣಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯನ್ನು ರಕ್ಷಣೆ ಮಾಡಿಕೊಳ್ಳಲು ನಾರಾಯಣ ಗೌಡ ಕಣದಲ್ಲಿ ಮಲಗಿದ್ದರು. ಬೆಳಗಿನ ಜಾವ ಕಣಕ್ಕೆ ಬಂದಿದ್ದ ಆನೆ ನಾರಾಯಣ ಗೌಡ ಅವರನ್ನು ಸೊಂಡಲಿನಿಂದ ಎತ್ತಿ ಬಿಸಾಕಿದೆ. ನಾರಾಯಣಗೌಡ ಅವರು ಪಕ್ಕದಲ್ಲಿದ್ದ ಹುಲ್ಲಿನ ಮೇಲೆ ಬಿದ್ದಿದ್ದರಿಂದ ಸಪಾಯದಿಂದ ಪಾರಾಗಿದ್ದಾರೆ.
ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ನಾರಾಯಣಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಡಾನೆಗಳ ಉಪಟಳ ಜಾಸ್ತಿಯಾಗಿದ್ದು ಇಲ್ಲಿರುವ ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Previous articleಶೀಘ್ರದಲ್ಲೇ ವಿಜಯಪುರದಲ್ಲಿ ಸಾಬೂನು ಉತ್ಪಾದನಾ ಘಟಕ
Next articleಸಾರಿಗೆ ವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ