ಕಾಂಗ್ರೆಸ್ ಹತಾಶೆಗೊಂಡಿದೆ…

0
21

ನಾವು ಕಾನೂನು ಹೋರಾಟ ಮಾಡುತ್ತೇವೆ. ಸಿಟಿ ರವಿಗೆ ನಮ್ಮ ಪಕ್ಷ ಎಲ್ಲಾ ಸಹಾಯ ಮಾಡುತ್ತದೆ

ಹುಬ್ಬಳ್ಳಿ: ಕಾಂಗ್ರೆಸ್ ಸತತ ಸೋಲಿನಿಂದ ಹತಾಶೆಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು
ರವಿವಾರ ಮಾಧ್ಯದಮವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌ ಹರಿಯಾಣ, ಮಹಾರಾಷ್ಟ್ರದಲ್ಲಿ ಹೀನಾಯವಾಗಿ ಸೋತಿದೆ. ವಿರೋಧ ಪಕ್ಷವೂ ಸಹ ಕಾಂಗ್ರೆಸ್ ಆಗಿಲ್ಲ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗೆದ್ದ ನಂತರ ಇಡೀ ಜಗತ್ತೇ ಗೆದ್ದ ವರ್ತನೆ ತೋರುತ್ತಿದೆ .
ಸಂಸತ್ತಿನಲ್ಲಿ ರಾಹುಲ್ ಗಾಂಧಿ, ಸಂದೀಪ್ ಪಾತ್ರ ಅವರಿಗೆ ಮೊಣಕೈಯಿಂದ ತಳ್ಳಿದ್ದಾರೆ. ರಾಹುಲ್ ಗಾಂಧಿ ತಮ್ಮ ಸೋಲನ್ನು ಮರೆಮಾಚಲು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನೆಹರು ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅತ್ಯಂತ ಘೋರ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ರಾಜೀನಾಮೆಯಿಂದ ಏನೂ ಫರಕ್ ಬಿಳಲ್ಲ ಅಂತ ಪತ್ರ ಬರೆದಿದ್ದಾರೆ. ನೆಹರು ಭಾರತ ರತ್ನ, ಇಂದಿರಾಗಾಂಧಿ ಭಾರತ ರತ್ನ, ರಾಜೀವ ಗಾಂಧಿ ಭಾರತರತ್ನ ತಮಗೆ ತಾವೇ ಕೊಟ್ಟುಕೊಂಡರು. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಬಿಜೆಪಿ ಬೆಂಬಲಿತ ಕಾಂಗ್ರೆಸ್ ವಲ್ಲದ ಪಕ್ಷ ಬರಬೇಕಾಯಿತು ಎಂದರು. ರಾಹುಲ್ ಗಾಂಧಿ ಮೀಸಲಾತಿ ಬಗ್ಗೆ ಸುಧೀರ್ಘ ಭಾಷಣ ಮಾಡಿದ್ದಾರೆ .‌ನೆಹರು ಅವರು ಮೀಸಲಾತಿ ಬಗ್ಗೆ ಕ್ವಾಲಿಟಿ ಬಗ್ಗೆ ಮಾತನಾಡಿದ್ದು ರೆಕಾರ್ಡ್ ಇದೆ ಎಂದರು.
ಸದನದಲ್ಲಿ ಗಲಾಟೆ ವಿಚಾರವಾಗಿ ಮಾತನಾಡಿ, ಸಿಟಿ ರವಿ ಅವರನ್ನು ಹತ್ತಿಕ್ಕಲು ಪ್ರಯತ್ನ ಮಾಡಲಾಗಿದೆ. ಅಧಿಕಾರಿಗಳಿಗೆ ಒಂದು ಮಾತು ಹೇಳಬೇಕೆಂದರೆ ಸರ್ಕಾರಗಳು ಬದಲಾಗುತ್ತವೆ. ತಮ್ಮ ಕಾರ್ಯ ತಾವು ಮಾಡಬೇಕು. ಕಮೀಷನರ್ ಬಾಲಿಶ ಹೇಳಿಕೆ‌ ನೀಡುತ್ತಿದ್ದಾರೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ಸಿಟಿ ರವಿಗೆ ನಮ್ಮ ಪಕ್ಷ ಎಲ್ಲಾ ಸಹಾಯ ಮಾಡುತ್ತದೆ ಎಂದರು.

Previous articleಸಿಎಂ ಕಾರಿಗೆ ಮುತ್ತಿಗೆ ಯತ್ನ
Next articleಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ