ಕತ್ತಿಯಿಂದಲೇ ಉತ್ತರ ಕೊಡಲು ನಾವು ಸಿದ್ಧ

0
10

ಮೈಸೂರು: ಚಿಕ್ಕಮಗಳೂರು ಭಯೋತ್ಪಾದಕ ಸ್ಲೀಪರ್ ಸೆಲ್‌ಗಳ ತಾಣವಾಗುತ್ತಿದೆ. ಇದೇ ಕಾರಣದಿಂದಲೇ ಅಲ್ಲಿ ಪ್ಯಾಲೆಸ್ತೈನ್ ಧ್ವಜ ಹಾರಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕಿಡಿಕಾರಿದರು.
ಸುದ್ದಿಗಾರರೊಡನೆ ಮಾತನಾಡಿ, ಈ ಹಿಂದೆ ಸಹ ಕೊಪ್ಪದಲ್ಲಿ ಯಾಸಿನ್ ಭಟ್ಕಳ್ ನೇತೃತ್ವದಲ್ಲಿ ಭಯೋತ್ಪಾದನಾ ತರಬೇತಿ ಶಿಬಿರ ನಡೆಸಲಾಗುತ್ತಿತ್ತು. ಅದನ್ನ ಪತ್ತೆ ಹಚ್ಚಿದ್ದು ಭಜರಂಗದಳ. ಇದು ದೇಶಕ್ಕೆ ಅಪಾಯಕಾರಿ, ಇದರ ಹಿಂದಿನ ಜಾಲವನ್ನು ತನಿಖೆಯಿಂದ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.
ಕತ್ತಿಯಿಂದಲೇ ಉತ್ತರ: ಇದಲ್ಲದೆ, ಮಂಗಳೂರು ಬಿ.ಸಿ ರೋಡ್‌ನಲ್ಲಿ ಹಿಂದೂಗಳಿಗೆ ಸವಾಲು ಹಾಕಿರುವ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಇದು ಭಾರತದ ದೇಶಕ್ಕೆ ಹಾಕಿರುವ ಸಾವಲು. ಯುದ್ಧವನ್ನು ನಾವು ಯುದ್ಧವಾಗಿಯೇ ಸ್ವೀಕರಿಸಿ ಉತ್ತರ ಕೊಡುತ್ತೇವೆ. ಹಿಂದೆ ನಮ್ಮ ಪೂರ್ವಜರು ಕತ್ತಿ ತೋರಿಸಿದಾಗ ಕತ್ತಿಯಿಂದಲೇ ಉತ್ತರ ಕೊಟ್ಟಿದ್ದರು. ಯುದ್ಧಕ್ಕೆ ಸವಾಲು ಹಾಕಿದಾಗ ಯುದ್ಧದ ಮೂಲಕವೇ ಗೆಲ್ಲಬೇಕು. ನಾವು ಸಹ ಕತ್ತಿಯಿಂದಲೇ ಉತ್ತರ ಕೊಡುತ್ತೇವೆ. ಇಲ್ಲವಾದರೆ ನಮ್ಮ ದೇಶ ಬಾಂಗ್ಲಾದೇಶ, ಪಾಕಿಸ್ತಾನದಂತೆ ಆಗುತ್ತದೆ. ಅದಕ್ಕೆ ನಾವು ಅವಕಾಶ ಕೊಡಬಾರದು ಎಂದರು.

Previous articleರಾಜ್ಯದ ಗಲಾಟೆಯಲ್ಲಿ ಕೇರಳ ಮುಸ್ಲಿಂರ ಕೈವಾಡ: ಆರೋಪ
Next articleಗಣೇಶ ವಿಸರ್ಜನೆ ಮೆರವಣಿಗೆ ಭದ್ರತೆಗೆ 3500ಕ್ಕೂ ಹೆಚ್ಚು ಸಿಬ್ಬಂದಿ