ಪ್ಯಾರಿಸ್: ಭಾನುವಾರ ಪ್ಯಾರಿಸ್‌ನಲ್ಲಿ ನಡೆದ ಪುರುಷರ ಒಲಿಂಪಿಕ್ಸ್ ೧೦೦ ಮೀಟರ್‌ನ ನಾಟಕೀಯ ಫೈನಲ್‌ನಲ್ಲಿ ಅಚ್ಚರಿ ನಡೆದಿದೆ. ವಿಶ್ವ ಚಾಂಪಿಯನ್ ಅಮೆರಿಕಾದ ನೋಹ್ ಲೈಲ್ಸ್ ಹಾಗೂ ಜಮೈಕಾದ ಕಿಶಾಣೆ ಥಾಂಪ್ಸನ್ ಇಬ್ಬರು ಕೂಡ ೯.೭೯ ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದು. ಕೆಲ ಕಾಲ ಚಿನ್ನದ ಪದಕ ಯಾರಿಗೆ ನೀಡಬೇಕೆಂಬ ಗೊಂದಲ ಸೃಷ್ಟಿಯಾಗಿತ್ತು.
ಆದರೆ, ಕಿಶಾನೆ ಥಾಂಪ್ಸನ್‌ನಿಂದ ಕೇವಲ ಐದು ಸಾವಿರದ ಒಂದು ಸೆಕೆಂಡಿನ ಭಾಗವು ಅವನನ್ನು ಬೇರ್ಪಡಿಸಿದ ಕಾರಣದಿಂದ ಕೊನೆಗೆ ಅಮೆರಿಕಾದ ನೋಹ್ ಲೈಲ್ಸ್ ಅವರನ್ನೇ ವಿಜೇತರನ್ನಾಗಿ ಮಾಡಲಾಯಿತು. ಇದರಿಂದ ೨೦೦೪ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ ಜಸ್ಟಿನ್ ಗ್ಯಾಟ್ಲಿನ್ ಚಿನ್ನ ಗೆದ್ದ ಬಳಿಕ, ಮತ್ತೊಮ್ಮೆ ಚಿನ್ನ ಗೆದ್ದ ಮೊದಲ ಅಮೆರಿಕನ್ ಎಂಬ ಖ್ಯಾತಿಗೆ ಲೈಲ್ಸ್ ಒಳಪಟ್ಟಿದ್ದಾರೆ.