ಏಪ್ರಿಲ್ 11ರಂದು ಮಂತ್ರಾಲಯದಲ್ಲಿ ರಾಧಾಕೃಷ್ಣರ ಕಲರವ

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠ ಹಾಗೂ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಲೀಲಾ ಅಮೃತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ಭಾರತೀಯ ಸಂಸ್ಕೃತಿಯ ಕಲೆಯಲ್ಲಿರುವ 8 ವಿಧದ ಶಾಸ್ತ್ರೀಯ ನೃತ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಧ್ಯಾತ್ಮಿಕವಾಗಿ ಭಗವಂತನ ರೂಪವನ್ನು ವಿಶೇಷ ನೃತ್ಯಗಳ ಮೂಲಕ ಕ್ಷೇತ್ರಗಳಲ್ಲಿ ಮಾಡುವ ನಿಟ್ಟಿನಲ್ಲಿ ಭಾರತ ದೇಶಾದ್ಯಂತ ಹಲವಾರು ಭಗವಂತನ ಶ್ರೀ ಕ್ಷೇತ್ರಗಳಲ್ಲಿ ನೃತ್ಯೋತ್ಸವ ಕಾರ್ಯಕ್ರಮಗಳ ಆಯೋಜನೆ ಮಾಡಿ 15000 ಕಲಾವಿದರಿಗೆ ವೇದಿಕೆಯನ್ನು ನೃತ್ಯ ಅಕಾಡೆಮಿ ಪೋಷಕರು ಹಾಗು ಕಲಾವಿದರ ಸಹಕಾರದ ಮೂಲಕ ಕಾರ್ಯಕ್ರಮದ ಯಶಸ್ವಿಯ ಹಾದಿಯಲ್ಲಿ.ಏಪ್ರಿಲ್ 11ರಂದು ಸಂಜೆ 4 ಗಂಟೆಗೆ ದೇಶ ವಿದೇಶಗಳಿಂದ ಆಗಮಿಸುತ್ತಿರುವ 4 ವರ್ಷದ ಮಗುವಿನಿಂದ 60 ವರ್ಷದ ವಯಸ್ಸಿನ 150 ಕ್ಕು ಹೆಚ್ಚು ಕಲಾವಿದರು ನೊಳಗೊಂಡು ರಾಧಾಕೃಷ್ಣರ ವೇಷ ಭೂಷಣದಲ್ಲಿ ಶ್ರೀ ಕೃಷ್ಣ ಲೀಲಾ ಅಮೃತ ವಿಶೇಷ ನೃತ್ಯ ಕಾರ್ಯಕ್ರಮವು ಪಕ್ಕ ವಾದ್ಯದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮದ ಬಗ್ಗೆ ಪೀಠಾಧಿಪತಿಗಳಾದ ಪರಮಪೂಜ್ಯ ಡಾ ಶ್ರೀ ಶ್ರೀ ಸುಭುದೇoದ್ರ ತೀರ್ಥ ಮಹಾ ಸ್ವಾಮೀಜಿಯವರು ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಭಾಗವಹಿಸುತ್ತಿರುವ ಎಲ್ಲಾ ಕಲಾವಿದರಿಗೆ ತಮ್ಮ ಆಶೀರ್ವಾದವನ್ನು ಮಾಡುವ ಮೂಲಕ ಮಂತ್ರಾಲಯಕ್ಕೆ ಆಹ್ವಾನಿಸಿದ್ದಾರೆ ಹಾಗು ಮೊಟ್ಟಮೊದಲ ಬಾರಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಶಾಸ್ತ್ರೀಯ ನೃತ್ಯಕ್ಕೆ ಮಂತ್ರಾಲಯದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ ಶ್ರೀ ಶ್ರೀ ಸುಭುದೇoದ್ರ ತೀರ್ಥ ಮಹಾ ಸ್ವಾಮೀಜಿಯವರ ಅಮೃತ ಹಸ್ತದಿಂದ ಪಕ್ಕ ವಾದ್ಯವನ್ನು ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹಾಗು ಈ ಕಾರ್ಯಕ್ರಮವನ್ನು ಪೀಠಾಧಿಪತಿಗಳಾದ ಪರಮಪೂಜ್ಯ ಡಾ ಶ್ರೀ ಶ್ರೀ ಸುಭುದೇoದ್ರ ತೀರ್ಥ ಮಹಾ ಸ್ವಾಮೀಜಿಯವರ ವರ್ದಂತಿ ಸಂದರ್ಭವಾಗಿ ಸಮರ್ಪಣೆ ಮಾಡುತ್ತಿದ್ದೇವೆ ಎಂದು ಕಾರ್ಯಕ್ರಮದ ಆಯೋಜನ ಕಾರ್ಯದರ್ಶಿ ಗಿನ್ನಿಸ್ ದಾಖಲೆ ಭರತನಾಟ್ಯ ಕಲಾವಿದೆ ಮಂತ್ರಾಲಯದ ಪರಿಮಳ ಪ್ರಶಸ್ತಿ ಪುರಸ್ಕೃತೆ ರಾಜ್ಯ ಪ್ರಶಸ್ತಿ ವಿಜೇತ ವಿದೂಷಿ ಡಾ. ಸ್ವಾತಿ ಪಿ ಭಾರದ್ವಾಜ್ ಅಧ್ಯಕ್ಷರಾದ ಶ್ರೀಮತಿ ಅನಿತಾ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ