ಎರಡು ಬಾರಿ ಸ್ಪರ್ಧಿಸಿ ಕರ್ತವ್ಯ ನಿರ್ವಹಿಸಿದ್ದೇನೆ, ಇನ್ನು…

0
31

ಮಂಗಳೂರು: ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಇಚ್ಛೆ ಇಲ್ಲ ಎಂದು ಸಚಿವ ಕೃಷ್ಣ ಭೈರೇಗೌಡರು ತಿಳಿಸಿದ್ದಾರೆ
ಮಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿರುವ ಅವರು ನಾನು ಈಗಾಗಲೇ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದೇನೆ. ಮೊದಲ ಬಾರಿ 2009 ರಲ್ಲಿ ನಾನು ಶಾಸಕನಾಗಿದ್ರೂ ಪಕ್ಷದ ಸೂಚನೆಯಂತೆ ಸ್ಪರ್ಧಿಸಿದ್ದೆ. ಆ ಸಂದರ್ಭದಲ್ಲಿ ಕೇವಲ ಪಕ್ಷದ ಸೂಚನೆ ಪಾಲಿಸಲು ಸ್ಪರ್ಧಿಸಿದ್ದೆ. 2019 ರ ಚುನಾವಣೆಯಲ್ಲೂ ಕೊನೆ ಕ್ಷಣದಲ್ಲಿ ಪಕ್ಷದ ಸೂಚನೆಗೆ ಗೌರವ ಕೊಟ್ಟು‌ ಸ್ಪರ್ಧಿಸಿದ್ದೆ. ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ಪಕ್ಷ ಹೇಳಿದಂತೆ ಎರಡು ಬಾರಿ ಸ್ಪರ್ಧಿಸಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದರು. ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಇಚ್ಛೆ ಇಲ್ಲ. ಈಗಾಗಲೇ ಪಕ್ಷದ ವರಿಷ್ಠರಿಗೆ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ವರಿಷ್ಠರೂ ಕೂಡ ನನ್ನ ಅಭಿಪ್ರಾಯಕ್ಕೆ ಗೌರವ ಕೊಟ್ಟಿದ್ದಾರೆ ಅಂತ ತಿಳಿದಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೇ ಉದ್ಭವಿಸುವುದಿಲ್ಲ ಎಂದರು.

Previous articleರಾಮ ಮಂದಿರ ಸ್ಫೋಟ ಬೆದರಿಕೆ ಪತ್ರ: ಎಲ್ಲಾ ದೇವಸ್ಥಾನಗಳಲ್ಲೂ ಸೂಕ್ತ ಭದ್ರತೆ
Next articleಸಮುದ್ರಕ್ಕೆ ಜಿಗಿದ ಸಚಿವ ಮಂಕಾಳ ವೈದ್ಯ