ಇಂದು ಮಾಜಿ ಸಿಎಂ ವಿಜಯ್ ರೂಪಾಣಿ ಅಂತ್ಯಕ್ರಿಯೆ

ಅಹಮದಾಬಾದ್‌: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರ ಅಂತ್ಯಕ್ರಿಯೆ ಇಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿದೆ.
ಭಾನುವಾರ ವಿಜಯ್ ರೂಪಾಣಿ ಅವರ ಸಹೋದರಿ ಡಿಎನ್‌ಎ ಜೊತೆಗೆ ವಿಜಯ್ ರೂಪಾನಿ ಡಿಎನ್‌ಣಿ ಮ್ಯಾಚ್ ಆಗಿತ್ತು. ಇಂದು ಬೆಳಗ್ಗೆ 11:30ಕ್ಕೆ ಸಿವಿಲ್ ಆಸ್ಪತ್ರೆಯಿಂದ ಮೃಹದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಬಳಿಕ ಮೃತದೇಹವನ್ನು ವಿಮಾನದ ಮೂಲಕ ರಾಜ್‌ಕೋಟ್‌ಗೆ ಕೊಂಡೊಯ್ಯಲಾಗುವುದು, ಮಧ್ಯಾಹ್ನ 2 ಗಂಟೆಯ ವೇಳೆಗೆ ರಾಜ್‌ಕೋಟ್ ತಲುಪುವ ನಿರೀಕ್ಷೆಯಿದೆ. ಸಂಜೆ 5 ಗಂಟೆಗೆ ಅಂತಿಮ ಯಾತ್ರೆ ಆರಂಭವಾಗಲಿದ್ದು, 6 ಗಂಟೆಯ ವೇಳೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ನಡೆಯಲಿದೆ.