ಆಹಾರ ಸಚಿವ ಮುನಿಯಪ್ಪ ಪ್ರಯಾಣಿಸುತ್ತಿದ್ದ ಕಾರು ಅಪಘಾತ

0
46

ಹಾಸನ: ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್‌. ಮುನಿಯಪ್ಪ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.
ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ಮುನಿಯಪ್ಪ ಪ್ರಯಾಣಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 75 ಶಾಂತ್ರಿಗ್ರಾಮದ ಟೋಲ್ ಬಳಿ ದುರ್ಘಟನೆ ನಡೆದಿದೆ. ಶಾಂತಿಗ್ರಾಮ ರಸ್ತೆಯ ಮೂಲಕ ಹಾಸನಕ್ಕೆ ಆಗಮಿಸುತ್ತಿದ್ದ ವೇಳೆ ಶುಲ್ಕ ವಸೂಲಿ ಕೇಂದ್ರದ ಹತ್ತಿರ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿದೆ. ಅಪಘಾತದ ಹೊಡೆತಕ್ಕೆ ಸಚಿವರ ಕಾರು ಜಖಂಗೊಂಡಿದೆ. ಈ ಹಿನ್ನೆಲೆಯಲ್ಲಿ ಬದಲಿ ವಾಹನದ ಮೂಲಕ ಸಚಿವರು ಸಮಾವೇಶಕ್ಕೆ ಆಗಮಿಸಿದ್ದಾರೆ.

Previous articleಖಾಸಗಿ ಕಂಪನಿಗಳ ಲಾಭಿಗೆ ಸರ್ಕಾರ ಮಣಿದಿದೆಯಾ?
Next articleಜೂ. ಏಷ್ಯಾಕಪ್ ಪ್ರಶಸ್ತಿ ಗೆದ್ದ ಭಾರತ ಹಾಕಿ ತಂಡ