ಆಸ್ತಿಗಾಗಿ ಕೊಲೆ: ಆರೋಪಿ ಬಂಧನ

0
25

ಚಿಕ್ಕೋಡಿ: ಆಸ್ತಿ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕೊಲೆಯಾದವನನ್ನು ದಬದಬಹಟ್ಟಿ ಗ್ರಾಮದ ಕೇಶವ ಬೊಸಲೆ(೪೭) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿಯನ್ನು
ಖಂಡೊಬಾ ಬೋಸಲೆ(೨೭) ಎಂದು ಪೋಲಿಸರು ತಿಳಿಸಿದ್ದಾರೆ. ಆರೋಪಿ ಹಾಗೂ ಕೊಲೆಯಾದ ದುರ್ದೈವಿ ದಬದಬಹಟ್ಟಿ ಗ್ರಾಮದ ನಿವಾಸಿಗಳು.
ಕಳೆದ ೨೦ ವರ್ಷಗಳಿಂದ ಜಮೀನಿನ ಸಲುವಾಗಿ ಚಿಕ್ಕಪ್ಪ ಹಾಗೂ ಮಗನ ಜೊತೆ ಜಗಳ ನಡೆಯುತ್ತಿತ್ತು ಎನ್ನಲಾಗುತ್ತಿದೆ. ನಿನ್ನೆ ಇಬ್ಬರು ದಾಯಾದಿಗಳು ಕೂಡಿ ಕೊಕಟನೂರ ಹೊರವಲಯದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ನಿನ್ನೆ ಮದ್ಯ ಸೇವನೆ ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ಆರೋಪಿ ಖಂಡೊಬಾ ಬೊಸಲೆಯನ್ನು ಐಗಳಿ ಪೋಲಿಸರು ಬಂಧಿಸಿದ್ದಾರೆ.

Previous articleಭಾರಿ ಗಾಳಿ: ನೆಲಕ್ಕುರುಳಿದ ವಿದ್ಯುತ್ ಕಂಬಗಳು
Next articleಶೀಲ ಶಂಕಿಸಿ ಪತ್ನಿಯ ಕೊಲೆ