ಅಪಘಾತ: ಆರು ಜನ ಸಾವು

0
18

ಖಾನಾಪುರ: ಮರಕ್ಕೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಜನ ಮೃತಪಟ್ಟ ಘಟನೆ ತಾಲೂಕಿನ ಬೀಡಿ-ಕಿತ್ತೂರ ರಸ್ತೆಯಲ್ಲಿ ನಡೆದಿದೆ.
ಕಿತ್ತೂರಿನಿಂದ ಬೀಡಿ ಗ್ರಾಮದತ್ತ ಹೊರಟಿದ್ದ ಪ್ರಯಾಣಿಕರ ಕಾರು ಮಂಗೇನಕೊಪ್ಪ ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ವೇಗವಾಗಿ ಅಪ್ಪಳಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಹೆಸರು, ಊರು ಮತ್ತಿತರ ಮಾಹಿತಿ ತಿಳಿದು ಬಂದಿಲ್ಲ.

Previous articleಬೆಳಗಾವಿ ವಿಮಾನ ಇಂಧನ ಉತ್ಪಾದನಾ ಕೇಂದ್ರವಾಗಲಿದೆ
Next article24ರಂದು ನಿಮಿಷಾಂಬ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ