ʼಸಾಯಿಬಾಬಾನೇ ಆಪರೇಷನ್ ಮಾಡಿದ್ದುʼ

0
7
kumaraswamy

ಬೆಂಗಳೂರು: ಜನರ ಸೇವೆ ಮಾಡಲಿ ಎಂದು ಭಗವಂತ ನನ್ನನ್ನು ಕಾಪಾಡಿದ್ದಾನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೂರನೇ ಬಾರಿ ಹೃದಯ ಶಸ್ತ್ರಚಿಕಿತ್ಸೆ ಬಳಿಕ ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಲೋಪವಾಗಿತ್ತು, ಈಗ ಮತ್ತೆ ಚಿಕಿತ್ಸೆ ಪಡೆದಿದ್ದೇನೆ. ನಾಡಿನಾದ್ಯಂತ ಅಭಿಮಾನಿಗಳು, ಹಿತೈಷಿಗಳು ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ. ಅವರ ಪ್ರಾರ್ಥನೆ ಫಲ ಕೊಟ್ಟಿದೆ. ಚಿಕಿತ್ಸೆ ಬಳಿಕ, ವೈದ್ಯರು ನನ್ನ ಬಳಿ ಚರ್ಚೆ ಮಾಡಿದರು. ವೈದ್ಯರು ಸಾಯಿಬಾಬಾನ ಭಕ್ತರಾಗಿದ್ದು, ಸಾಯಿಬಾಬಾನಿಗೆ ಪೂಜೆ ಸಲ್ಲಿಸಿ ಆಪರೇಷನ್ ನೆರವೇರಿಸಿದ್ದಾರೆ. ನಾನು ಆಪರೇಷನ್ ಮಾಡಿಲ್ಲ, ಸಾಯಿಬಾಬಾನೇ ಆಪರೇಷನ್ ಮಾಡಿದ್ದು ಎಂದು ವೈದ್ಯರು ಹೇಳಿದರು. ಮತ್ತೊರ್ವ ವೈದ್ಯ ಹಂಗೇರಿಯಾದವರು, ನನಗೆ ಮರುಜನ್ಮ ನೀಡಿದ್ದಾರೆ ಎಂದರು.

Previous articleವೀಣಾ ಕಾಶಪ್ಪನವರ ನಡೆ ಇಂದು ತೀರ್ಮಾನ: ಸಭೆಯಲ್ಲಿ ಸಮಾಜದ ಶಾಸಕರುಗಳು ಭಾಗಿ..?
Next articleಬೇಜವಾಬ್ದಾರಿ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ