ರಬಕವಿ-ಬನಹಟ್ಟಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಆಗಿ ಬನಹಟ್ಟಿಯ ನೇಕಾರನ ಮಗಳಾದ ಈಶ್ವರ ಸುಟ್ಟಟ್ಟಿಯವರ ಮಗಳು ವೀಣಾ ಆಯ್ಕೆಗೊಂಡಿದ್ದು ವಿಶೇಷ.
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ವೀಣಾ ನೇಕಾರಿಕೆಯ ಕುಟುಂಬದಿಂದ ಬಂದವರಾಗಿದ್ದು, ಹುಬ್ಬಳ್ಳಿಯ ಚೇತನ ಬರದ್ವಾಡರನ್ನು ವಿವಾಹವಾಗಿದ್ದಾರೆ. ವೀಣಾ ಇವರು ಮಹಾನಗರ ಪಾಲಿಕೆಯ 49ನೇ ವಾರ್ಡ್‌ನಿಂದ ಮಹಾನಗರ ಪಾಲಿಕೆಗೆ ಆಯ್ಕೆಯಾಗಿದ್ದಾರೆ. ಇವರ ಆಯ್ಕೆಯಿಂದ ಬನಹಟ್ಟಿ ಪಟ್ಟಣದ ನೇಕಾರ ವಲಯದಲ್ಲಿ ಹಾಗು ಬಿಜೆಪಿ ಕಾರ್ಯಕರ್ತರಲ್ಲಿ ಸಂತಸಪಟ್ಟರು.