ಹತ್ಯೆಯಾದ ಸೌಜನ್ಯಳ ಪರ ಬೆಳಗಾವಿಯಲ್ಲಿ ಕೂಗು: ಮೃತಳ ಕುಟುಂಬಕ್ಕೆ ನ್ಯಾಯಕ್ಕಾಗಿ ಪಂಜಿನ ಮೆರವಣಿಗೆ

0
9

ಬೆಳಗಾವಿ : ಧರ್ಮಸ್ಥಳದಲ್ಲಿ ಹತ್ಯೆ ಮಾಡಲಾಗಿರುವ ವಿದ್ಯಾರ್ಥಿನಿ ಸೌಜನ್ಯ ಅವಳ ಕುಟುಂಬಕ್ಕೆ ನ್ಯಾಯ ನೀಡುವಂತೆ ಒತ್ತಾಯಿಸಿ ವಿವಿಧ ಕನ್ನಡ‌ ಮತ್ತು ದಲಿತಪರ ಸಂಘಟನೆಗಳ ಕಾರ್ಯಕರ್ತರಿಂದ ಬೆಳಗಾವಿಯಲ್ಲಿ ರವಿವಾರ ರಾತ್ರಿ ಕ್ಯಾಂಡಲ್ ಹಿಡಿದು ಪಂಜಿನ ಮೆರವಣಿಗೆ ಮಾಡಲಾಯಿತು.
ಕಿಡಿಗೇಡಿಗಳು ಧರ್ಮಸ್ಥಳದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಸೌಜನ್ಯ ಎಂಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದರು ಎನ್ನಲಾಗಿದೆ. ನಿಜವಾದ ಆರೋಪಿತರನ್ನು ಬಂಧಿಸಿ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ರವಿವಾರ ರಾತ್ರಿ ಪ್ರತಿಭಟನೆ ನಡೆಸಲಾಯಿತು.
ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ರವಿವಾರ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ಹಾಕಲಾಯಿತು. ವಿದ್ಯಾರ್ಥಿನಿ ಸೌಜನ್ಯಳ ಫೋಟೊ ಪ್ರದರ್ಶಿಸಿ ಆಕೆಯ ಕುಟುಂಬಕ್ಕೆ ನ್ಯಾಯ ಕೊಡಿಸಲು ಒತ್ತಾಯಿಸಲಾಯಿತು. ಸೌಜನ್ಯ ಭಾವಚಿತ್ರ ಎದುರು ಕ್ಯಾಂಡಲ್ ಬೆಳಗಿ ನ್ಯಾಯಕ್ಕಾಗಿ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಹಲಾವರು ನಾಗರಿಕರು ಭಾಗಿಯಾಗಿದ್ದರು.

Previous articleನಾಲ್ವರು ಕಳ್ಳರ ಬಂಧನ: ೧೪ ಮೋಟಾರ್ ಪಂಪಸೆಟ್ ವಶ
Next articleದಿಢೀರ್ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆ..!